ಜನ್ಮತ ಕಿವುಡು, ಮೂಗಿ ಕಲಾವತಿಗೆ ಆಕಸ್ಮಿಕ ಬೆಂಕಿ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ತಿರಂದಾಜ್ ಚಿತ್ರ ಮಂದಿರದ ಎದುರುಗಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಕಲಾವತಿ ಹುಟ್ಟು ಕಿವುಡು, ಮೂಕಳಾಗಿದ್ದು, ಬುಧವಾರ ಆಕಸ್ಮಿಕ ಬೆಂಕಿ ಅಪಘಾತದಲ್ಲಿ ಮೈಗೆ ಗಾಯ ಮಾಡಿಕೊಂಡು ಗುಲ್ಬರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವಳ ಚಿಕಿತ್ಸೆ ಸಹಾಯಕ್ಕೆ ಮನವಿ ಮಾಡಲಾಗಿದೆ.
ಹುಟ್ಟು ಕಿವುಡು, ಮೂಕಳಾದ ಅವಳಿಗೆ ತಂದೆ ಜಯಸೂರ್ಯ ಮೃತರಾಗಿದ್ದು, ತಾಯಿ ಕೂಲಿ ನಾಲಿ ಮಾಡುತ್ತ, ತನ್ನ, ತಾಯಿ ಮಗಳು ಸೇರಿದಂತೆ ಮೂರು ಜನರ ಹೊಟ್ಟೆ ಹೊರೆಯಬೇಕಾಗಿದೆ. ಕಳೆದ ವರ್ಷ ಶಾಲೆಯ ಮುಖ್ಯೋಪಾಧ್ಯಾಯ ಶಿವಪುತ್ರ ಕೋಣಿನ್ ಅವರು ಮಗುವಿನ ಸ್ಥಿತಿ ಗಮನಿಸಿ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿಗಳಾದ ಚನ್ನಬಸಪ್ಪ ಮುದೋಳರವರನ್ನು ಸಂಪರ್ಕಿಸಿ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ 20 ಸಾವಿರ ರು. ವೆಚ್ಚದಲ್ಲಿ ಶ್ರವಣ ಸಾಧನ ಯಂತ್ರವನ್ನು ಕಿವಿಗೆ ಅಳವಡಿಸಿದ್ದರು.
ಆದರೆ, ಬುಧವಾರ ಬೆಳಗ್ಗೆ 9ಕ್ಕೆ ಬಡ ಕಲಾವತಿಗೆ ಆಕಸ್ಮಿಕವಾಗಿ ಮನೆಯಲ್ಲಿ ಉಟ್ಟ ಲಂಗಕ್ಕೆ ಬೆಂಕಿ ತಗುಲಿ ಮೈ ಮೇಲಿನ ಬಟ್ಟೆ ಸುಟ್ಟು ಹೋಗಿದ್ದು, ದೇಹದ ಮುಂಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಅವಳನ್ನು ಗುಲ್ಬರ್ಗ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ವಿಷಯ ತಿಳಿದ ಭಂಕೂರ ಸಿಆರ್ಸಿ ಬಸವರಾಜ ಹೂಗಾರ ವೈಯಕ್ತಿಕವಾಗಿ 2 ಸಾವಿರ ಸಹಾಯ ನೀಡಿದ್ದು, ಬಡ ಕಲಾವತಿಯ ಚಿಕಿತ್ಸೆಗೆ ಸಹಾಯ ನೀಡುವವರು ಶಾಲಾ ಮುಖ್ಯೋಪಾಧ್ಯಾಯರಾದ ಶಿವಪುತ್ರ ಕೋಣಿನ್ 9060941444 ಅವರನ್ನು ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲಾವತಿಯ ಕುಟುಂಬಕ್ಕೆ ಸಂಪರ್ಕಿಸಲು ಕೋರಲಾಗಿದೆ.