ಆರ್ಟಿಇ ಅನುಷ್ಠಾನ ವಿಳಂಬಕ್ಕೆ ತೌಷಿಫ್ ವಿಷಾದ
ಯಾದಗಿರಿ: ರಾಜ್ಯದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿ 3 ವರ್ಷ ಕಳೆದರೂ ಸಮಸ್ಯೆಗಳು ಹಾಗೇ ಉಳಿದುಕೊಂಡಿದೆ. ಶಿಕ್ಷಣ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ವಿಳಂಬವಾಗುತ್ತಿರುವುದಕ್ಕೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತೌಷಿಫ್ ಮಡಿಗೇರಿ ವಿಷಾದ ವ್ಯಕ್ತಪಡಿದ್ದಾರೆ.
ನಗರದ ಮಹತ್ಮಾ ಗಾಂಧಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಶಿಕ್ಷಣ ಹಕ್ಕುಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಹಕ್ಕು ಕಾಯ್ದೆಯಂತೆ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಉಚಿತ ಸೀಟು ಎಂಬುದನ್ನು ಮಾತ್ರ ಪ್ರಚುರಪಡಿಸಲಾಗಿದೆ. ಕಾಯ್ದೆಯ ಇತರ ಆಯಾಮಗಳನ್ನು ಹೆಚ್ಚಾಗಿ ಪ್ರಚಾರ ಮಾಡಲಿಲ್ಲ. ಸೀಟು ನಿರಾಕರಣೆ, ಅಲ್ಪಸಂಖ್ಯಾತರ ಶಾಲೆ ಎಂದು ಸುಳ್ಳು ಮಾಹಿತಿ ನೀಡುವುದು, ಪರೀಕ್ಷೆ ನಡೆಸುವುದು ಹೀಗೆ ಹಲವಾರು ದೂರುಗಳ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಸೇವೆಯ ಹೆಸರಿನಲ್ಲಿ ಸರ್ಕಾದಿಂದ ಹಲವಾರು ಸೌಲಭ್ಯಗಳನ್ನು ಪಡೆದು ಶಾಲೆ ತೆರೆಯುವ ಖಾಸಗಿ ಸಂಸ್ಥೆಗಳು, ಸಮಾಜದ ಬಡ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಉಚಿತ ಸೀಟು ನಿರಾಕರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
--