ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ಆರೋಗ್ಯ ತಪಾಸಣಾ ಶಿಬಿರ

Lingaraj Badiger
Updated On : 15 Jun 2013, 10:58 am

ಗುಲ್ಬರ್ಗ: ಹೈ-ಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆ ನೇತೃತ್ವದಲ್ಲಿ ಕೆಮ್ಮು, ಅಲರ್ಜಿ, ಅಸ್ತಮಾ ರೋಗಿಗಳಿಗೆ ಜೂ.15ರಂದು ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಟಿಬಿ ಮತ್ತು ಟೆಸ್ಟ್ ವಿಭಾಗದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 5 ಗಂಟೆಯವರೆಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶ್ವಾಸಕೋಶ ತಜ್ಞ ಡಾ. ಗಿರಿರಾಜ ಬೊಮ್ಮ ಪಾಲ್ಗೊಂಡು ವಿವಿಧ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿರುವ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ಮತ್ತು ಸಲಹೆ ನೀಡುವರು. ಈ ಶಿಬಿರದಲ್ಲಿ ಉಚಿತ ಸ್ಪೈರೋಮೆಟ್ರಿ ಟೆಸ್ಟ್ ಮಾಡಲಾಗುವುದು. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಬಸವೇಶ್ವರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಎನ್. ಪಾಟೀಲ್ ತಿಳಿಸಿದ್ದಾರೆ.
50 ಸಾವಿರ ಮೌ. ಗುಟ್ಕಾ ಜಪ್ತಿ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಫರಹತಾಬಾದ್ ಗ್ರಾಮದಲ್ಲಿ ಜಿಲ್ಲಾಧಿಕಾರಿ ಪ್ರಸನ್ನಕುಮಾರ ಅವರು 3 ಅಂಗಡಿಗಳ ಮೇಲೆ ದಾಳಿ ಮಾಡಿ ಅಂದಾಜು 10 ಸಾವಿರ ಮೌಲ್ಯದ ಹಾಗೂ ಗುಲ್ಬರ್ಗ ನಗರದಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಆರ್.ಎಸ್. ಬಿರಾದಾರ ಹಾಗೂ ತಂಡದವರು 8 ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 40 ಸಾವಿರ ಮೌಲ್ಯದ ಗುಟ್ಕಾ ಹಾಗೂ ಪಾನ ಮಸಾಲಾ ಜಪ್ತಿ ಮಾಡಿದ್ದಾರೆ ಎಂದು ಅಂಕಿತ ಅಧಿಕಾರಿ ಹಾಗೂ ಜಿಲ್ಲಾ ಸಮೀಕ್ಷಣಾಧಿಕಾರಿ ಜಿಲ್ಲಾ ಸಮೀಕ್ಷಣಾ ಘಟಕ ಗುಲ್ಬರ್ಗ ಅವರು ತಿಳಿಸಿದ್ದಾರೆ. ಸುಪ್ರಿಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ನಿಷೇಧ ಮತ್ತು ಮಾರಾಟ) ನಿಬಂಧನೆಗಳು, 2011ರ ನಿಬಂಧನೆ 2,3,4ರ ಪ್ರಕಾರ ರಾಜ್ಯಾದ್ಯಂತ ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳುಳ್ಳ ಗುಟ್ಕಾ ಮತ್ತು ಪಾನ ಮಸಾಲಾ ಪದಾರ್ಥಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ವಿತರಣೆಯನ್ನು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮಹಿಳಾ ನಿಲಯ ನಿವಾಸಿ ಸಾವಿತ್ರಿ ಕಲ್ಯಾಣ
ಗುಲ್ಬರ್ಗ: ಇಲ್ಲಿನ ರಾಜ್ಯ ಮಹಿಳಾ ನಿಲಯದ ನಿವಾಸಿ ಸಾವಿತ್ರಿ ಅವರ ವಿವಾಹವು ಯಾದಗಿರಿ ಜಿಲ್ಲೆಯ ಸುರಪುರದ ಪ್ರಸನ್ನಕುಮಾರ ಕುಲಕರ್ಣಿ ಅವರೊಂದಿಗೆ ರಾಜ್ಯ ಮಹಿಳಾ ನಿಲಯದಲ್ಲಿ ಶುಕ್ರವಾರ ಸರಳವಾಗಿ ನಡೆಯಿತು. ಪ್ರಸನ್ನಕುಮಾರ ಕುಲಕರ್ಣಿ ಅವರೊಂದಿಗೆ ಸ್ವ ಇಚ್ಛೆಯಿಂದ ಮದುವೆಯಾಗಲು ಒಪ್ಪಿದ್ದರಿಂದ ಹಾಗೂ ಸಾವಿತ್ರಿಯ ಮುಂದಿನ ಭವಿಷ್ಯ ಹಾಗೂ ಪುನರ್ವಸತಿಗಾಗಿ ಅವಳ ಹಿತದೃಷ್ಟಿಯಿಂದ ವಿವಾಹವನ್ನು ನೆರವೇರಿಸಲಾಗಿದೆ. ಪ್ರಸನ್ನಕುಮಾರ ತಂದೆ ಹಳ್ಳೇರಾವ ಕುಲಕರ್ಣಿ ಇವರು ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದವರಾಗಿದ್ದಾರೆ. ಪ್ರಸನ್ನಕುಮಾರನ ತಂದೆ ನಿಧನ ಹೊಂದಿದ್ದು, ತಾಯಿ ತಾರಾಬಾಯಿ ಅವರಿಗೆ ಪ್ರಸನ್ನಕುಮಾರ ಒಬ್ಬನೇ ಮಗನಾಗಿದ್ದಾನೆ. ತಾಯಿಯ ಒಪ್ಪಿಗೆ ಮೇರೆಗೆ ವಿವಾಹ ನೆರವೇರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement