ಕಾರ್ಮಿಕ ಇಲಾಖೆ ಗುರುತು ಚೀಟಿ
ಆಳಂದ: ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾರ್ಮಿಕ ಸೇವಾ ಸೌಲಭ್ಯ ಕೇಂದ್ರದಿಂದ ಕಟ್ಟಡ ಕಾರ್ಮಿಕರಿಗೆ, ವಾಹನ ಚಾಲಕರಿಗೆ ಸೌಲಭ್ಯ ಗುರುತಿನ ಚೀಟಿ ವಿತರಿಸಲಾಯಿತು.
ವ್ಯಾಪ್ತಿಯ ಸಾಲೇಗಾಂವ, ಕಿಣ್ಣಿಸುಲ್ತಾನ, ಚಿತಲಿ ಹಾಗೂ ತೆಲಾಕುಣಿ ಗ್ರಾಮದಲ್ಲಿ ಈಗಾಗಲೇ ಕಾರ್ಮಿಕ ಸೇವಾ ಸೌಲಭ್ಯದಡಿ ವಾಹನ ಚಾಲಕರು, ಕಟ್ಟಡ ಕಾರ್ಮಿಕರ ಸೇರಿ 135 ಮಂದಿ ಹೆಸರು ನೋಂದಾತ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸಲಾಗಿದೆ ಎಂದು ಸಮುದಾಯ ಸುಗಮಗಾರ ರಾಜಕುಮಾರ ಎಸ್.ಮುನ್ನೊಳ್ಳಿ ತಿಳಿಸಿದರು.
ಕಾರ್ಮಿಕ ಇಲಾಖೆಯಲ್ಲಿ ವಿಮೆ ಕಂತು ಭರಿಸಿ ಕಾರ್ಡ್ ಪಡೆದರೆ ಆಸ್ಪತ್ರೆ ಚಿಕಿತ್ಸಾ ಖರ್ಚು ಹಾಗೂ ಮಕ್ಕಳಿಗೆ ಶಿಷ್ಯ ವೇತನ ಇನ್ನಿತರ ಸರ್ಕಾರದ ಹಲವಾರು ಯೋಜನೆಯ ಲಾಭ ದೊರೆಯುತ್ತದೆ ಎಂದರು.
ಅಕ್ಕಮಹಾದೇವಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಾಲುಬಾಯಿ ಕುಂಬಾರ, ಕಾರ್ಯದರ್ಶಿ ಗಿರಿಜಾಬಾಯಿ ಕುಂಬಾರ, ಯಶ್ವಂತರಾವ ಪೊಲೀಸ್ ಪಾಟೀಲ್, ಸೂರ್ಯಕಾಂತ ಪಾಟೀಲ್ ಸಂಜುಕುಮಾರ ಬಿರಾದಾರ ಇತರರು ಪಾಲ್ಗೊಂಡಿದ್ದರು.