ಬೀಜೋಪಾಚಾರ; ಉತ್ತಮ ಫಸಲು
ಸುರಪುರ: ರೈತರು ಮಣ್ಣು ಪರೀಕ್ಷೆ ಮಾಡಿಸಿ ಅದಕ್ಕೆ ತಕ್ಕಂತೆ ಅಗತ್ಯವಿರುವ ರಸಗೊಬ್ಬರಗಳ ಬಳಕೆ ಮಾಡಬೇಕು. ಬಿತ್ತನೆ ಸಂದರ್ಭದಲ್ಲಿ ಬೀಜೋಪಚಾರ ಮಾಡುವ ಮೂಲಕ ಉತ್ತಮ ಫಸಲನ್ನು ಪಡೆಯಬೇಕು ಎಂದು ಕವಡಿಮಟ್ಟಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಪಾಲಯ್ಯ ರೈತರಿಗೆ ಸಲಹೆ ನೀಡಿದರು. ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಸಿದ್ದ ಬೀಜೋಪಚಾರ ಮತ್ತು ಭೂ ಚೇತನ ಆಂದೋಲನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಬಿತ್ತನೆಯ ಸಂದರ್ಭದಲ್ಲಿ ಸೂಕ್ತ ಲಘು ಪೋಷಕಾಂಶಗಳನ್ನು ಬಳಸುವುದರಿಂದ ಅಧಿಕ ಇಳುವರಿ ಪಡೆಯಬಹುದು ಮತ್ತು ಬೆಳೆಗಳಿಗೆ ರೋಗಗಳು ಬರುವ ಸಾಧ್ಯತೆ ಕಡಿಮೆ ಎಂದರು. ಭೂ ಚೇತನ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಸಚಿನ್ ಉಪನ್ಯಾಸ ನೀಡಿದರು. ಪ್ರಕಾಶ ಬಿ., ಅಶೋಕ ಕುಲಕರ್ಣಿ ಹೆಮನೂರು, ವೆಂಕಟೇಶ ಇದ್ದರು. ಹತ್ತಾರು ಹಳ್ಳಿಗಳ ರೈತರು ಮಾಹಿತಿ ಪಡೆದರು. ಶರಣಪ್ಪ ಸ್ವಾಗತಿಸಿದರು. ಜಗದೀಶ್ ವಂದಿಸಿದರು.
--