ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೂಲ ಸೌಕರ್ಯ; ಪಪಂ ವಿಫಲ

Vishwanath S
Updated On : 18 Jun 2013, 11:30 am

ಕನ್ನಡಪ್ರಭ ವಾರ್ತೆ ,   ಚಿಂಚೋಳಿ ,   ಜೂ.17
ಪಟ್ಟಣ ಪಂಚಾಯ್ತಿಗೆ ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ಸಾಕಷ್ಟು ಅನುದಾನ ನೀಡಿದರೂ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಪಟ್ಟಣ ಪಂಚಾಯ್ತಿ ಸಂಪೂರ್ಣ ವಿಫಲವಾಗಿದ್ದು, ಸಾರ್ವಜನಿಕರಿಗೆ ಬೇಕಾಗುವ ಸೌಲಭ್ಯ ಒದಗಿಸದಿದ್ದಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಶಾಸಕ ಡಾ. ಉಮೇಶ ಜಾಧವ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅಧಿಕಾರಿಗಳನ್ನು ತರಾಟೆಗೆ: ಪಟ್ಟಣ ಪಂಚಾಯ್ತಿಗೆ ಶನಿವಾರ ದಿಢೀರನೆ ಭೇಟಿ ನೀಡಿದ ಶಾಸಕರು, ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸಮಸ್ಯೆಗಳ ಬಗ್ಗೆ ಮುಖ್ಯಾಧಿಕಾರಿ ಸುರೇಶ ಬಬಲಾದ ಅವರನ್ನು ತರಾಟೆಗೆ ತೆಗೆದುಕೊಂಡರು.
  ಪಟ್ಟಣ ಪಂಚಾಯ್ತಿನಲ್ಲಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು ಇಲ್ಲವಾದರೆ ಬೇರೆಡೆ ವರ್ಗಾವಣೆ ಮಾಡಿಕೊಳ್ಳಬಹುದು ಎಂದು ಖಾರವಾಗಿ ನುಡಿದರು.
  ಭೋಗಾಲಿಂಗದಳ್ಳಿ ಹೊಸನಗರ ಬಡಾವಣೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಿದ ಮನೆಗಳ ನಿವಾಸಿಗಳಿಗೆ ಯಾಕೆ ಸೌಕರ್ಯ ನೀಡಿಲ್ಲ. ಮಹಿಳೆಯರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಒದಗಿಸಿಲ್ಲ. ತಕ್ಷಣ ಜನರಿಗೆ ಸೌಲಭ್ಯ ನೀಡಲು ಕ್ರಮ ಕೈಕೊಳ್ಳಬೇಕೆಂದು ಸೂಚಿಸಿದರು.
ಶಾಸಕರ ಗಮನಕ್ಕೆ: ಪಟ್ಟಣದಲ್ಲಿ ಅನೇಕ ಬಡಾವಣೆಯಲ್ಲಿ ಹೈಮಾಸ್ಟ್ ದೀಪಗಳನ್ನು ಹಾಕಲಾಗಿದೆ. ಅವುಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಅನೇಕ ಓಣಿಗಳಲ್ಲಿ ಚರಂಡಿಗಳು ತುಂಬಿ ವಾಸನೆ ನಾರುತ್ತಿದ್ದರೂ ಗಮನಹರಿಸುತ್ತಿಲ್ಲವೆಂದು ಪಟ್ಟಣದ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಹೊಸ ಸರ್ಕಾರ ರಚನೆಯಾಗಿದೆ. ಹಣದ ಕೊರತೆಯಿಲ್ಲ. ಸಾರ್ವಜನಿಕರ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕೆಂದು ಶಾಸಕರು ಹೇಳಿದರು.
  ಪಟ್ಟಣ ಪಂಚಾಯ್ತಿನಲ್ಲಿ ಕಾರ್ಮಿಕರ ಕೊರತೆ, ಪಂಪ್ ಆಪರೇಟರ್, ಕಸಗೂಡಿಸುವವರ ಕಡಿಮೆ ಸಂಖ್ಯೆಯಲ್ಲಿದೆ. ಇನ್ನು ಹೆಚ್ಚಿನ ಕಾರ್ಮಿಕರ ಅಗತ್ಯವಿದೆ ಎಂದು ಮುಖ್ಯಾಧಿಕಾರಿ ಸುರೇಶ ಬಬಲಾದ ಶಾಸಕರ ಗಮನಕ್ಕೆ ತಂದರು.
  ಪಪಂ ಸದಸ್ಯರಾದ ಮೊಗಲಪ್ಪ ಕರಕಟ್ಟಿ, ರಾಜು ರಾಠೋಡ, ರಾಮಶೆಟ್ಟಿ ಪವಾರ, ವಿಜಯಕುಮಾರ ಗಂಗನಪಳ್ಳಿ, ಮಾಜಿ ಪ್ರಧಾನ ಬಸವರಾಜ ಹದನೂರ, ಶರಣಪ್ಪ ಸುಂಕದ, ಜಗನ್ನಾಥ ಕಟ್ಟಿ, ಶಾಮರಾವ ರಾಠೋಡ, ಜಗದೀಶಸಿಂಗ್ ಠಾಕೂರ, ಶಿವನಾಗಯ್ಯ ಸ್ವಾಮಿ, ಮಸೂದ ಸೌದಾಗರ, ಮಂಜಲೇ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement