ಹೈ.ಕ. ಜನರ ಬೇಡಿಕೆಗೆ ತಕ್ಕಂತೆ ನಿಯಮ ರೂಪಿಸಲು ಮನವಿ
ಲಿಂಗಸ್ಗೂರು: ಹೈದ್ರಾಬಾದ್ ಕರ್ನಾಟಕಕ್ಕೆ ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಸೂಕ್ತ ಹಾಗೂ ಸರ್ವಾಂಗೀಣ ಅಭಿವೃದ್ಧಿ ಹಿತದೃಷ್ಟಿಯಲ್ಲಿ ಈ ಭಾಗದ ಜನರ ಬೇಡಿಕೆಗೆ ತಕ್ಕಂತೆ ನಿಯಮ ರೂಪಿಸಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಭಾಗದ ಪ್ರಗತಿಪರರು ಹಾಗೂ ವಿದ್ವಾಂಸರ ಜೊತೆ ಚರ್ಚಿಸಿ ಜನರ ಬೇಡಿಕೆಯಂತೆ ಕರಡು ರೂಪದಲ್ಲಿ ವರದಿ ತಯಾರಿಸಲಾಗಿದ್ದು, ಅದರಂತೆ ಕಾನೂನು ರೂಪಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ, ತಾಪಂ ಉಪಾಧ್ಯಕ್ಷ ಮಾನಪ್ಪ ಚೌಹಾಣ, ಪುರಸಭೆ ಸದಸ್ಯ ಬಸವರಾಜ ಗುತ್ತೇದಾರ, ಮುಖಂಡರಾದ ಎಂ.ಡಿ. ಸಾಧಿಕ್ ಅಲಿ, ಶಿವಪ್ಪ ಮಾಚನೂರ ಸೇರಿದಂತೆ ಇದ್ದರು.