ಕಾಂಗ್ರೆಸ್ ಸಂಭ್ರಮ
ಚಿತ್ತಾಪುರ: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ರೇಲ್ವೆ ಖಾತೆ ನೀಡಿರುವುದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಸೋಮವಾರ ಸಂಜೆ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿ ಪಕ್ಷದ ಹೈಕಮಾಂಡ್ ಖರ್ಗೆ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ರೇಲ್ವೆ ಖಾತೆಯಂತಹ ಮಹತ್ವದ ಖಾತೆಯನ್ನು ನೀಡಿದ್ದು, ಕರ್ನಾಟಕ ರಾಜ್ಯ ಅದರಲ್ಲೂ ಹೈ-ಕ ಭಾಗಕ್ಕೆ ವಿಶೇಷ ಮನ್ನಣೆ ನೀಡಿರುವುದಾಗಿ ಹೇಳಿ ಹರ್ಷ ವ್ಯಕ್ತಪಡಿಸಿ, ಪಕ್ಷ ಕಚೇರಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ್ ಕರದಾಳ, ಮುಕ್ತಾರ ಪಟೇಲ್, ನಾಗಯ್ಯ ಗುತ್ತೇದಾರ, ಶಿವರುದ್ರ ಭೀಣಿ, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಮಲ್ಲಿಕಾರ್ಜುನ, ಪಾಶಾಮಿಯ್ಯ, ಶಿವಕಾಂತ, ಸುರೇಶ, ಶರಣಪ್ಪ, ಈರಪ್ಪ, ದೇವಿಂದ್ರ, ಲಿಂಗಣ್ಣ, ಭೀಮಣ್ಣ, ನಜೀರ್ ಭಾಗವಹಿಸಿದ್ದರು.