ಕೆಟ್ಟು ನಿಲ್ಲುವ ಬಸ್; ವಿದ್ಯಾರ್ಥಿಗಳ ಪರದಾಟ
ಚಿತ್ತಾಪುರ: ತಾಲೂಕಿನ ಕದ್ದರಗಿ ಗ್ರಾಮಕ್ಕೆ ಸಂಚರಿಸುವ ಬಸ್ಗಳು ರಸ್ತೆ ಮಧ್ಯದಲ್ಲಿ ಕೆಟ್ಟು ನಿಲ್ಲುವುದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಗ್ರಾಮದಿಂದ ದಿನಾಲು ನೂರಾರು ವಿದ್ಯಾರ್ಥಿಗಳು, ಶಾಲಾ-ಕಾಲೇಜಿಗೆ ಚಿತ್ತಾಪುರಕ್ಕೆ ಬರುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ. ಬಂದರೆ ರಸ್ತೆ ಮಧ್ಯದಲ್ಲಿ ನಿಂತು ಬಿಡುತ್ತವೆ ಎಂದು ಪ್ರಯಾಣಿಕರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ವಿಳಂಬವಾಗಿ ಶಾಲೆ ತಲುಪುತ್ತಿದ್ದಾರೆ. ಕೆಲವು ಸಲ ವಿದ್ಯಾರ್ಥಿಗಳು ಪರೀಕ್ಷೆ ಗೈರು ಹಾಜರಿಯಾದ ಊದಾಹರಣೆಗಳಿವೆ. ಸರಿಯಾದ ಬಸ್ಗಳು ಸಂಚರಿಸುವಂತೆ ಮಾಡಬೇಕು, ಎರಡು ಶಾಶ್ವತವಾಗಿ ಬಸ್ ಓಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕದ್ದರಗಿ ಗ್ರಾಮ ಘಟಕ ಅಧ್ಯಕ್ಷ ಜಗದೇವ ಕುಂಬಾರ ಹಾಗೂ ಉಪಾಧ್ಯಕ್ಷ ಪ್ರದೀಪ ಎಸ್. ಪೂಜಾರಿ ಅವರು ವಿಭಾಗ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.