ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪುರಾಣ ಶ್ರವಣ ಅಪರೂಪ; ಕಳವಳ

Vishwanath S
Updated On : 19 Jun 2013, 12:25 pm

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.18
ಪುರಾಣ- ಪುಣ್ಯಕಥೆಗಳ ಶ್ರವಣ ಇಂದಿನ ದಿನಮಾನಗಳಲ್ಲಿ ಅಪರೂಪವಾಗುತ್ತಿದೆ. ಇದು ಕಳವಳಕಾರಿ ಬೆಳವಣಿಗೆ. ಇಂದಿನ ಎಲ್ಲ ಅಪಸವ್ಯಗಳಿಗೆ ಈ ಬೆಳವಣಿಗೆಯೂ ಕಾರಣ ಎಂದು ಉತ್ತರಾದಿ ಮಠಾಧೀಶ ಸತ್ಯಾತ್ಮ ತೀರ್ಥ ಶೀಪಾದರು ಕಳವಳ ವ್ಯಕ್ತಪಡಿಸಿದರು.
ರಾಯರ ಮಠದಲ್ಲಿ ಕಳೆದ ಒಂದು ವಾರದಿಂದ ಸಾಗಿರುವ ಪಂಡಿತ ರಘುತ್ತಮಾಚಾರ್ಯ ನಾಗಸಂಪಿಗೆ ಅವರ ಭಾಗವತ ಪುರಾಣ ಮಂಗಲ ಮಹೋತ್ಸವವನ್ನು ನೆರವೇರಿಸಿದ ಅವರು, ಪುರಾಣ- ಭಾಗವತ ಸಂದೇಶದಂತಹ ಪ್ರಾಚೀನ ಗ್ರಂಥಗಳ ಶ್ರವಣ, ಮನನ ಬದುಕಿಗೆ ಗಟ್ಟಿ ನೆಲೆ ಒದಗಿಸುವ ಶಕ್ತಿ ಹೊಂದಿದ್ದು ಇನ್ನಾದರೂ ಜನತೆ ಇಂತಹ ಸತ್ಕಾಲಕ್ಷೇಪದತ್ತ ಹೆಚ್ಚಿನ ಒಲವು ತೋರಬೇಕೆಂದು ಕರೆ ನೀಡಿದರು.
ಪುರಾಣ ಶ್ರವಣದಿಂದ ಪುಣ್ಯ ಸಂಚಯ: ಪುರಾಣಗಳನ್ನು ಕೇಳಬೇಕು, ಅಲ್ಲಿನ ನೀತಿಗಳನ್ನು ಮೈಗೂಡಿಸಿಕೊಳ್ಳಬೇಕು, ಬದುಕಿನಲ್ಲಿ ಅಲ್ಲಿನ ಸಾರ- ಸಂದೇಶಗಳನ್ನು ಅನ್ವಯಿಸಿಕೊಳ್ಳಬೇಕು. ಪುರಾಣ ಶ್ರವಣದಿಂದ ಪುಣ್ಯ ಸಂಚಯವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ವೃದ್ಧಾಶ್ರಮಕ್ಕೆ ಭೇಟಿ: ಬಹಳ ದಿನಗಳ ನಂತರ ಗುಲ್ಬರ್ಗ ಮಹಾನಗರಕ್ಕೆ ದಿಗ್ವಿಜಯ ಮಾಡಿರುವ ಶ್ರೀಗಳು ಮಠದ ಆಸರೆಯಲ್ಲಿ ಆರಂಭವಾಗಿರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದಲ್ಲದೆ ಬ್ರಹ್ಮಪುರ ರಾಯರಮಠದಲ್ಲಿ ಸಂಜೆ ನಡೆದ ಶ್ರೀಮದ್ಭಾಗವತ ಸಂವತ್ಸರ ಜ್ಞಾನ ಸತ್ರದ ದ್ವಿತೀಯ ಸ್ಕಂದದ  ಮಂಗಳ ಮಹೋತ್ಸವದಲ್ಲೂ ಭಾಗವಹಿಸಿ ಆಶಿರ್ವಚನ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement