ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬೇಡಿಕೆ ಈಡೇರಿಕೆಗೆ ದಸಂಸ ಪ್ರತಿಭಟನೆ

Vishwanath S
Updated On : 19 Jun 2013, 12:26 pm

ಯಾದಗಿರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕವು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿತು.
  ಕಳೆದ ಮೇ 5ರಂದು ನಡೆದ ಚುನಾವಣೆಯಲ್ಲಿ ಸುರಪುರ ತಾಲೂಕಿನ ಸದಬ ಗ್ರಾಮದಲ್ಲಿ ದಲಿತರ ಮತ್ತು ಸವರ್ಣೀಯ ವ್ಯಕ್ತಿಯ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದು ಕ್ರಮೇಣ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೆಂಭಾವಿ ಪೊಲೀಸ್ ಅಧಿಕಾರಿಗಳು, ಗ್ರಾಮದ ಹಿರಿಯರು ಶಾಂತಿ ಸಭೆ ನಡೆಸಿದ್ದರು.
ದಂಡ ಹಾಕುವ ಬೆದರಿಕೆ: ಆದರೆ ಇತ್ತೀಚೆಗೆ ಮತ್ತೆ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಆರಂಭವಾಗಿದೆ. ಈಗ ಪಡಿತರ ಅಂಗಡಿಯಲ್ಲಿ ಆಹಾರಧಾನ್ಯ ಪಡೆದಲ್ಲಿ ಅವರಿಗೆ 2 ಸಾವಿರ ದಂಡ ಹಾಕಲಾಗುವುದಾಗಿ ಬೆದರಿಕೆ ಹಾಕಿದ್ದಾರೆ. ಇದೆಲ್ಲ ಪರಿಸ್ಥಿತಿಯನ್ನು ಗಮನಿಸದಲ್ಲಿ ದಲಿತರ ಮೇಲೆ ಬಹಿಷ್ಕಾರ ಹಾಕುವ ಹುನ್ನಾರು ನಡೆದಿದೆ. ಅದಕ್ಕಾಗಿ ಇದನ್ನು ತಡೆಯಬೇಕು. ಜೂ.24 ರೊಳಗಾಗಿ ಸೂಕ್ತ ಕ್ರಮ ಜರಗಿಸದಿದ್ದಲ್ಲಿ ಸುರಪುರ ಬಂದ್ ಕರೆಯಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಬಂಧನಕ್ಕೆ ಆಗ್ರಹ: ದಲಿತರ ಮೇಲೆ ಬಹಿಷ್ಕಾರ ಹಾಕಲು ಸಂಚು ಮಾಡಿದ ಮೇಲ್ವರ್ಗದ ಕೆಲವರನ್ನು ಗೂಂಡಾ ಕಾಯ್ದಯಡಿ ಬಂಧಿಸಬೇಕು. ದಲಿತ ಮಹಿಳೆಯರಿಗೆ ಶೌಚಾಲಯ ನಿರ್ಮಿಸಬೇಕು. ಶರಣಪ್ಪ, ಚಂದಪ್ಪ, ನಿಂಗಣ್ಣ, ಶಿವಪುತ್ರ, ಶಿವಲಿಂಗ, ರವೀಂದ್ರ, ದೇವಿಂದ್ರಪ್ಪ, ತಿಪ್ಪಣ್ಣ, ಮಾನಪ್ಪ, ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement