ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿವಿ ಪತ್ರಿಕೋದ್ಯಮ ವಿಭಾಗಕ್ಕೆ ಪರಿಣತರ ನೇಮಿಸಲು ಆಗ್ರಹ

Vishwanath S
Updated On : 19 Jun 2013, 12:25 pm

ಗುಲ್ಬರ್ಗ: ಪತ್ರಿಕೋದ್ಯಮ ವಿಷಯ ಪರಿಣತರನ್ನು ಸಂದರ್ಶನಕ್ಕೆ ನೇಮಿಸುವವರೆಗೆ ಜೂ.19ರಂದು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆಯುವ ಪಿಎಚ್‌ಡಿ ಪ್ರವೇಶದ ಸಂದರ್ಶನ ಮುಂದೂಡಬೇಕು ಎಂದು ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ವಿಶ್ವವಿದ್ಯಾಲಯದ ಕುಲಪತಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಪತ್ರಿಕೋದ್ಯಮ ವಿಭಾಗದಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವವರೆಗೆ ಬೇರೆ ವಿಶ್ವವಿದ್ಯಾಲಯದ ವಿಷಯ ಪರಿಣತರನ್ನು ತಾತ್ಕಾಲಿಕವಾಗಿ ಮುಖ್ಯ ಮಾರ್ಗದರ್ಶಕರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಪಿಎಚ್‌ಡಿ ಪದವಿಯ ಸೀಟುಗಳ ಸಂಖ್ಯೆ ನಿಖರವಾಗಿ ತಿಳಿಸಬೇಕು. ವಿಷಯ ಪರಿಣತರಲ್ಲದ ಮಾರ್ಗದರ್ಶಕರನ್ನು ಆಯ್ಕೆ ಮಾಡಿದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಹಾಗೂ ನೇಮಕಾತಿಗೆ ಸಮಸ್ಯೆ ಉಂಟಾಗುತ್ತದೆ. ಈ ಸಂಬಂಧ ಪ್ರೊಸಿಡಿಂಗ್ಸ್‌ನಲ್ಲಿ ಬೇರೆ ವಿಶ್ವವಿದ್ಯಾಲಯದ ವಿಷಯ ಪರಿಣತರು ಮುಖ್ಯ ಮಾರ್ಗದರ್ಶಕರಾಗಿ ಆಸಕ್ತಿ ತೋರಿಸಿದರೂ ಇಲ್ಲಿನ ವಿಶ್ವವಿದ್ಯಾಲಯದಿಂದ ಒಪ್ಪಿಗೆ ಪತ್ರ ನೀಡುವಂತೆ ಪತ್ರ ಬರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement