ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೃಷಿ ಅಧಿಕಾರಿಗಳಿಂದ ತಪ್ಪು ಮಾಹಿತಿ: ಜಾಧವ

Lingaraj Badiger
Updated On : 20 Jun 2013, 11:06 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಜೂ.19
ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಮಳೆ ಪ್ರಮಾಣ ಅತ್ಯಂತ ಕಡಿಮೆಯಾಗುತ್ತಿದ್ದು, ಆದರೆ ಕೃಷಿ ಅಧಿಕಾರಿಗಳು ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಹಿಂದುಳಿದ ಪ್ರದೇಶಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಶಾಸಕ ಡಾ. ಉಮೇಶ ಜಾಧವ ಹೇಳಿದರು.
ಪಟ್ಟಣದ ಚಂದಾಪುರ ನಗರ ಹೊರವಲಯದ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಜಲ ಪವನಶಾಸ್ತ್ರ ವೀಕ್ಷಣಾ ಕೇಂದ್ರ, ಚಂದಾಪುರ ಜಲಮಾಪನ ಕೇಂದ್ರ ಮತ್ತು ಟೆಲಿಮೆಟ್ರಿಕ್ ಹವಾಮಾನ ಮಾಪನ ಜಾಲ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಉಪ-ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿ ಅಲ್ಲಿನ ಮಳೆ ಮಾಪನ ಯಂತ್ರಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೃಷಿ ಇಲಾಖೆ ಅಧಿಕಾರಿಗಳ ವರದಿ ಪ್ರಕಾರ ಚಿಂಚೋಳಿಯಲ್ಲಿ ಈಗಾಗಲೇ ಶೇ.97.72 ಮಿ.ಮೀ. ಮಳೆಯಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ ಪ್ರತಿ ವರ್ಷ ಅಧಿಕ ಮಳೆಯಾಗುತ್ತಿದ್ದರೆ ಐನಾಪುರ ವಲಯದಲ್ಲಿ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಯಾಕೆ ಉದ್ಭವವಾಗುತ್ತದೆ ಎಂದು ಪ್ರಶ್ನಿಸಿದರು.
ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶ ತಾಲೂಕಿನಲ್ಲಿ ಮಳೆ ಪ್ರಮಾಣ ಕಳೆದ 25 ವರ್ಷಗಳಿಂದ ಅತಿ ಕಡಿಮೆಯಾಗುತ್ತಿದ್ದರೂ ಮಳೆ ವರದಿಯ ತಪ್ಪು ಮಾಹಿತಿಯಿಂದಾಗಿ ನಮ್ಮ ತಾಲೂಕಿಗೆ ಬರ ಪೀಡಿತ ಪ್ರದೇಶವೆಂದು ಘೋಷಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಮಶೆಟ್ಟಿ ಪವಾರ, ಅಬ್ದುಲ್ ಬಾಸೀತ್, ಕೆ.ಎಂ. ಬಾರಿ, ಶಿವಕುಮಾರ ಕೊಳ್ಳೂರ, ಬಸವರಾಜ ಪಾಟೀಲ್ ಹದನೂರ, ವಿಜಯಕುಮಾರ ಗಂಗನಪಳ್ಳಿ, ಜಗದೀಶಸಿಂಗ್ ಠಾಕೂರ, ಶೇಖರ ಗಾರಂಪಳ್ಳಿ, ತಾಪಂ ಸದಸ್ಯ ನರಸಿಂಹಲು ಕುಂಬಾರ, ಸಂಜೀವರೆಡ್ಡಿ ಚಿಮ್ಮನಚೋಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement