ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಪಾಯದ ಅಂಚಲ್ಲಿ ಜಲಸಂಗ್ರಹಗಾರ

Vishwanath S
Updated On : 22 Jun 2013, 10:42 am

ಗುಲ್ಬರ್ಗ/ಶಹಾಬಾದ್: ನಾಲವಾರ ಗ್ರಾಮದ ವಾರ್ಡ್ 4ರಲ್ಲಿರುವ ಜಲ ಸಂಗ್ರಹಾರ ಭಾಗಶಃ ಶೀಥಿಲಾವಸ್ಥೆಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಅದು ಬೀಳುವ ಅಪಾಯದಲ್ಲಿದೆ.
ಗ್ರಾಮಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಿದ ಜಲಸಂಗ್ರಹಾರ ಒಂದು ಲಕ್ಷ ಲೀ. ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಆದರೆ, ಈ ಸಂಗ್ರಹಾರ ಹಳೆಯದಾಗಿದ್ದು, ಅಲ್ಲಲ್ಲಿ ಬಿರುಕು ಬಿಡುತ್ತಿದೆ.
ಸಂಗ್ರಹಾರದ ಕಂಬಗಳ ಮೇಲಿನ ಸಿಮೆಂಟ್ ಕಿತ್ತು ಹೋಗಿದ್ದರಿಂದ ಒಳಗೆ ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಮೇಲೆ ತೇಲಿವೆ. ಸಂಗ್ರಹಾರದಲ್ಲಿ ನೀರು ಶೇಖರಿಸಿದಾಗ ಅದು ಸೋರುತ್ತಿರುವುದರಿಂದ ಕಬ್ಬಿಣದ ರಾಡುಗಳು ಮತ್ತಷ್ಟು ತುಕ್ಕು ಹಿಡಿಯುತ್ತಿವೆ. ಈ ಸಂಗ್ರಹಾರದ ಕಂಪೌಂಡಿಗೆ ಹೊಂದಿಕೊಂಡಂತೆ ಪ್ರಾಥಮಿಕ ಶಾಲೆ, ಬಿಸಿ ಊಟದ ಕೋಣೆಗಳಿದ್ದು, ಶೀಥಿಲಾವಸ್ಥೆಯಲ್ಲಿರುವ ಈ ಸಂಗ್ರಹಾರ ಯಾವುದೇ ಸಂದರ್ಭದಲ್ಲಿ ಬೀಳುವ ಹಂತದಲ್ಲಿದೆ. ಈ ಹಿಂದೆ ನಾಲವಾರ ವಲಯದ ಕೊಲ್ಲೂರ ಗ್ರಾಮದಲ್ಲಿ ಇದೇ ರೀತಿ ಶೀಥಿಲಾವಸ್ಥೆಯಲ್ಲಿದ್ದ ಸಂಗ್ರಹಾರ ರಾತ್ರಿ ಹೊತ್ತು ಉರುಳಿ ಬಿದ್ದಿದ್ದರಿಂದ ಯಾವುದೇ ಅಪಾಯ ಆಗದೆ ಇರುವುದು ಒಂದು ಉದಾಹರಣೆಯಾಗಿದೆ.
ಈ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ, ಜಿಪಂ ಸದಸ್ಯ ಸಾಬಣ್ಣ ಅಡ್ಡೇಶಿ, ಅಧಿಕಾರಿಗಳು ಶೀಘ್ರವಾಗಿ ಗಮನ ಹರಿಸಿ, ಅಪಾಯ ಎದುರಾಗುವ ಮುಂಚೆ ಸೂಕ್ತ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement