ಕಾರ ಹುಣ್ಣಿಮೆಗೆ ರೈತರ ಸಿದ್ಧತೆ
ಆಳಂದ: ಒಂದಡೆ ಬರಗಾಲ ಹಾಗೂ ಮತ್ತೊಂದೆಡೆ ಮುಂಗಾರು ಹಂಗಾಮಿನ ತಯಾರಿಯ ನಡುವೆ ಜೂ.23 ರಂದು ಆಚರಿಸಲಾಗುವ ಜಾನುವಾರುಗಳ ಹಬ್ಬ ಎಂದೇ ಕರೆಯಿಸಿಕೊಳ್ಳುವ ಕಾರಹುಣ್ಣಿಮೆ ಹಬ್ಬಕ್ಕೆ ತಾಲೂಕಿನಾದ್ಯಂತ ಭರದ ಸಿದ್ಧತೆ ನಡೆದಿದೆ.
ಈ ಪ್ರಯುಕ್ತ ಸಂತೆಯಂದು ಹಬ್ಬದ ಸಾಮಗ್ರಿ ಖರೀದಿಯಲ್ಲಿ ಜನ ಜಂಗುಳಿಂದ ರೈತರು ಆಗಮಿಸಿದ್ದರು.
ಅಂದು ತಮ್ಮ ಮನೆಯಲ್ಲಿನ ಜಾನುವಾರುಗಳಿಗೆ ಪ್ರತಿಯೊಬ್ಬ ಪಶು ಪಾಲಕರು ಮೈತೊಳೆದು, ಹೋರಿ, ಎತ್ತುಗಳಿಗೆ ಬಣ್ಣ ಬಣ್ಣದಿಂದ ಅಲಂಕರಿಸುವರು. ನೈವೇದ್ಯ ಉಣಬಡಸಿ ಸಂಜೆ ಬೆಂಡು ಭಜಂತ್ರಿಗಳೊಂದಿಗೆ ಆಕರ್ಷಕ ಮೆರವಣಿಗೆ ಕೈಗೊಳ್ಳುವರು.
ಜೂನ್ ತಿಂಗಳ ಮುಂಗಾರಿ ಮಳೆ ಇನ್ನೂ ಈ ಭಾಗದಲ್ಲಿ ಸಮರ್ಪಕವಾಗಿ ಸುರಿದಿಲ್ಲ. ಭೂಮಿ ಸಂಪೂರ್ಣವಾಗಿ ಹದವಾಗದೆ ಇರುವುದು ಬಿತ್ತನೆ ಮುಂದೂಡುತ್ತಿವೆ. ಈಗಾಗಲೇ ರೈತರು ಬೀಜ, ಗೊಬ್ಬರ ಖರೀದಿ ಸಿದ್ಧತೆಯಲ್ಲಿದ್ದಾರೆ. ಅನೇಕರು ಬಿತ್ತನೆ ಆರಂಭಿಸಿದ್ದಾರೆ. ಇದೆಲ್ಲದರ ನಡುವೆ ಬಂದಿರುವ ಕಾರುಹುಣ್ಣಿಮೆ ಹಬ್ಬವು ಬರವನ್ನು ಮರೆಯಿಸಿ ಮುಂದಿನ ಹಂಗಾಮಿಗೆ ತಯಾರಿ ನಡೆಸುವಲ್ಲಿ ಮಗ್ನವಾಗಿರುವ ರೈತಾಪಿಗಳಿಗೆ ಈ ಹಬ್ಬ ಶುತರಲು ಎಂದು ಪ್ರಾರ್ಥಿಸುತ್ತಿದ್ದಾರೆ.
ಬೆಲೆ ದುಪ್ಪಟ್ಟು: ಎತ್ತು, ಹೋರಿ ಮತ್ತಿತರ ಜಾನುವಾರು ಕೊರಳಿನ ಕಂಡ, ಮತಾಟಿ, ಮೂಗುದಾರ, ಆಟೆಕು, ಕೊಂಬುಗಳಿಗೆ ಹಚ್ಚುವ ಬಣ್ಣ ಹೀಗೆ ಎಲ್ಲ ಸಾಮಗ್ರಿಗಳ ಬೆಲೆ ಮಾರುಕಟ್ಟೆಯಲ್ಲಿ ದುಪ್ಪಟ್ಟಾಗಿದೆ. ರೈತರ ಈಚೆಗೆ ಪುಂಡಿ ಬಿತ್ತನೆ ಕೈಬಿಟ್ಟಿರುವುದು ನಾರು ಇಲ್ಲವಾಗಿದೆ. ಹಗ್ಗ ಸೋಲು ತಯಾರಿಕೆ ನಿಂತುಹೋಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಸಿದ್ಧಪಡಿಸಿದ ಸಾಮಗ್ರಿಗಳ ಮೇಲೆ ಎಲ್ಲರು ಅವಲಂಬಿತವಿದ್ದು, ರೈತರ ಜೇಬಿಗೆ ಕತ್ತರಿ ಬೀಳುತ್ತಿರುವುದು ಪ್ರಮುಖ ಕಾರಣ ಎನ್ನುತ್ತಾರೆ ರೈತರು.