ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಕ್ಕಳ ಹಕ್ಕು ಕಡ್ಡಾಯ ಪಾಲಿಸಿ: ಶಾಸಕ

Vishwanath S
Updated On : 22 Jun 2013, 10:47 am

ಯಾದಗಿರಿ: ಮಕ್ಕಳ ಹಕ್ಕುಗಳು ಕಡ್ಡಾಯವಾಗಿ ಪಾಲನೆಯಾಗಬೇಕು. ಇದರಿಂದ ಮಾತ್ರ ಎಲ್ಲಾ ಮಕ್ಕಳು ಸಮಾನವಾಗಿ ಬೆಳೆಯಲು ಸಾಧ್ಯ ಎಂದು ಮಕ್ಕಳ ರಕ್ಷಣಾ ಜಿಲ್ಲಾ ಘಟಕದ ಅಧಿಕಾರಿ ಎಸ್.ಎನ್. ಜಾಧವ ಹೇಳಿದರು. ನಗರದ ಡಾನ್ ಬಾಸ್ಕೊ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆ ಮತ್ತು ಮಕ್ಕಳ ಹಕ್ಕುಗಳ ಕ್ಲಬ್ ಉದ್ಘಾಟಿಸಿ ಮಾತನಾಡಿ, ಮಕ್ಕಳು ದೈಹಿಕ ಹಾಗೂ ಶಾರೀರಿಕ ಬೆಳವಣಿಗೆಯಾದರೆ ಮಾತ್ರ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವಿಸಲು ಸಾಧ್ಯ. ಮಕ್ಕಳು ಸಂತೋಷವಾಗಿ, ಸುರಕ್ಷಿತ ವಾತಾವರಣದಲ್ಲಿ ತಾರತಮ್ಯವಿಲ್ಲದೆ ಬಾಲ್ಯವನ್ನು ಅನುಭವಿಸಬೇಕು. ಇದು ಎಲ್ಲ ಮಕ್ಕಳ ಹಕ್ಕು ಎಂದರು.
ದುಡಿಮೆಗೆ ಮಕ್ಕಳ ಬಿಡಬೇಡಿ: ಮಕ್ಕಳನ್ನು ಎಲ್ಲರೂ ಎಲ್ಲ ಸಂದರ್ಭದಲ್ಲಿ ಸಮಾನವಾಗಿ ಪರಿಗಣಿಸಬೇಕು ಮತ್ತು ಮಕ್ಕಳ ಘನತೆಗೆ ಕುಂದುಂಟಾಗಬಾರದು. ಮಕ್ಕಳನ್ನು ದುಡಿಮೆಗೆ ಬಿಡಬಾರದು. ಬದಲಿಗೆ ಮಕ್ಕಳನ್ನು ಶಾಲಾ ಶಿಕ್ಷಣದಲ್ಲಿ ತೊಡಗಿಸಿಕೊಂಡಾಗ ಮಾತ್ರ ಈ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
  ಸಮಾಜ ಸೇವಾ ಕೇಂದ್ರದ ನಿರ್ದೇಶಕ ರೆಜಿ ಜೇಕಬ್ ಪ್ರಸ್ತಾವಿಕವಾಗಿ ಮಾತನಾಡಿ, ಮಕ್ಕಳ ಅತ್ಯಂತ ಪ್ರಮುಖ ಅವಶ್ಯಕತೆಗಳೇ ಮಕ್ಕಳ ಹಕ್ಕು. ಅವುಗಳಿಗೆ ಮನ್ನಣೆ ಕೊಡುವುದು ಅಥವಾ ಜಾರಿಗೆ ಮಾಡುವುದು ಎಲ್ಲ ವಯಸ್ಕರ ಜವಾಬ್ದಾರಿ. ಮಕ್ಕಳ ಹಕ್ಕುಗಳನ್ನು ಯಾರೂ ಯಾವುದೇ ಸಂದರ್ಭದಲ್ಲೂ ಉಲ್ಲಂಘಿಸಬಾರದು ಎಂದರು.
 ಸಂಸ್ಥೆ ನಿರ್ದೇಶಕ ಸಜ್ಜಿ ಜಾರ್ಜ್, ಫಾ.ಯೇಸುದಾಸ, ಶರಣಪ್ಪ ಇದ್ದರು. ಬಿ.ಜಿ. ಆಶಾ ಸ್ವಾಗತಿಸಿದರು. ಸುಹಾಸ ಕಾರ್ಯಕ್ರಮ ನಿರೂಪಿಸಿದರು. ಐಶಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement