ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಾಂತಿ- ಭೇದಿಯಿಂದ 35ಕ್ಕೂ ಹೆಚ್ಚು ಅಸ್ವಸ್ಥ

Vishwanath S
Updated On : 22 Jun 2013, 10:46 am

ಯಾದಗಿರಿ: ಶಹಾಪುರ ತಾಲೂಕಿನ ದೋರನಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 35ಕ್ಕೂ ಹೆಚ್ಚು ಜನರಿಗೆ ವಾಂತಿ- ಭೇದಿಯಿಂದ ಬಳಲುತ್ತಿರುವ ಘಟನೆ ನಡೆದಿದೆ.
  ಗ್ರಾಮದ ಹಿರೇಅಗಸಿ ಸಂಗಣ್ಣ ಬಾವಿ ನೀರು ಕುಡಿದು ಅಸ್ವಸ್ಥಗೊಂಡು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಳೆಯಿಲ್ಲದ್ದರಿಂದ ಬಾವಿಯ ನೀರು ತಳಮಟ್ಟ ಕಂಡಿದ್ದು, ಅದೇ ನೀರನ್ನು ಅನಿವಾರ್ಯವಾಗಿ ಗ್ರಾಮದ ಜನರು ಬಳಸುತ್ತಿದ್ದಾರೆ. ಇದರಿಂದ ಕಳೆದ ಎರಡು ದಿನಗಳಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಅನೇಕರು ವಾಂತಿ- ಭೇದಿಯಿಂದ ಬಳಲಿ ಆಸ್ಪತ್ರೆ ಸೇರಿದ್ದಾರೆ. ಸುದ್ದಿ ತಿಳಿದು ಜಿಪಂ ಉಪಾಧ್ಯಕ್ಷ ಶರಣಿಕಕುಮಾರ ಧೋಖಾ ಆಸ್ಪತ್ರೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ವೈದ್ಯರಿಗೆ ಅಗತ್ಯ ಚಿಕಿತ್ಸೆ ನೀಡಲು ಸೂಚಿಸಿದರು. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸುವುದಾಗಿ ಅವರು ತಿಳಿಸಿದರು. ಈ ವೇಳೆ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಕಂದಕೂರ, ಮಹಿಪಾಲರಡ್ಡಿ ದುಪ್ಪಲ್ಲಿ, ಸಿದ್ದಣಗೌಡ ಕಾಡಂನೋರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement