ಅಧಿಕ ಬೆಲೆಯಲ್ಲಿ ರಸಗೊಬ್ಬರ ಮಾರಾಟ
ಆಳಂದ: ಬಿತ್ತನೆ ಕಾಲಕ್ಕೆ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ರಸಗೊಬ್ಬರ ಬೆಲೆ ಇಳಿಸಿದರೂ ಮಾರುಕಟ್ಟೆಯಲ್ಲೇ ಯಥಾವತ್ತಾಗಿ ಮಾರಾಟ ನಡೆದ ಪ್ರಕರಣ ಸ್ವತಃ ಜಾಗೃತ ದಳ ಅಧಿಕಾರಿಗಳೇ ಮಂಗಳವಾರ ಹೊರಹಾಕಿದ ಘಟನೆ ನಡೆದಿದೆ.
1 ಏಪ್ರಿಲ್ 2013 ರಂದು ಸರ್ಕಾರ ರಸಗೊಬ್ಬರ ಬೆಲೆ ಪರಿಸ್ಕರಿಸಿ ಇಳಿಸಿದೆ.
ಯೂರಿಯಾ ವಿಧಗಳಲ್ಲಿ: ಐಪಿಎಲ್ ಗೊಬ್ಬರದ ಹಳೆಯ ದರ 887 ನಂತರ ಸರ್ಕಾರ ಪರಿಷ್ಕೃತವಾಗಿ ನಿಗಧಿಪಡಿಸಿದ ದರ 844 ಇಳಿಕೆಯಾಗಿದೆ. ಇದೇ ರೀತಿ ಕ್ರಮವಾಗಿ ಜುವಾರಿ ಗೊಬ್ಬರ 885, 845.50. ರು. ಸಿಎಫ್ಎಲ್ ಗೊಬ್ಬರ 885, 843ಗೆ ಇಳಿಕೆಯಾಗಿದೆ. ಮೊದಲಿನ ದರ ಹಾಗೂ ಸರ್ಕಾರ ಇಳಿಸಿದ ದರದ ಗೊಬ್ಬರ ಎಂಸಿಎಫ್ 885- 843, ಫ್ಯಾಕ್ಸ್ ಗೊಬ್ಬರ 880,95-828.
ಡಿಎಪಿ ವಿಧಗಳಲ್ಲಿ: ಸಿಎಫ್ಎಲ್ 1260-1187, ಜಿಎಸ್ಎಫ್ಸಿ 1240, 1186, ಐಪಿಎಲ್ 1260 -1186, ಇಫ್ಕೋ 1260-1186, ಎಂಸಿಎಫ್ 1266-1192, ಜುವಾರಿ 1260-1189, ಆರ್ಸಿಎಫ್ 1392, 1186, ಕ್ರಬ್ಕೋ 1266-1186 ಇಳಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದರು ನೂರಾರು ಮಂದಿ ರೈತರು ಸಾವಿರಾರು ಚೀಲಗೊಬ್ಬರ ಈಗಾಗಲೇ ಹೆಚ್ಚಿನ ಬೆಲೆ ತೆತ್ತಿ ಖರೀದಿಸಿ ಹೊರೆ ಅನುಭವಿಸಿದ್ದಾರೆ.
ಹಿಂದಿನ ಹೆಚ್ಚಿನ ಬೆಲೆ ಅಲ್ಲದೆ, ಚೀಲಮೊಂದಕ್ಕೆ 50ಗಳಿಂದ 1000ಕ್ಕೆ ಹೀಗೆ 200 ಹೆಚ್ಚಿಗೆ ಪಡೆಯಲಾಗುತ್ತಿದೆ ಎಂದು ರೈತರು ಹೇಳಿಕೊಂಡಿದ್ದಾರೆ.
ಜಾಗೃತದಳ ಭೇಟಿ: ಜಿಲ್ಲಾ ಕೃಷಿ ಜಾಗೃತದಳ ಅಧಿಕಾರಿ ಜಿ.ಆರ್. ಕೋಟಿ ನೇತೃತ್ವದಲ್ಲಿ ಆಳಂದಕ್ಕೆ ಮಂಗಳವಾರ ಹಠಾತ್ ಭೇಟಿ ನೀಡಿ ಆಗ್ರೋ ಕೇಂದ್ರಗಳ ಮೇಲೆ ದಾಳಿ ಮಾಡಿದೆ.ಸರ್ಕಾರ ಪರಿಷ್ಕೃತ ದರ ಹೊರತುಪಡಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದೆ. ಮೈಂದರ್ಗಿ ಆಗ್ರೋ ಏಜೆನ್ಸಿ ಮಾರಾಟ ಪರವಾನಿಗೆ ರದ್ದುಪಡಿಸಲು ಮೇಲಾಧಿಕಾರಿಗಳಿಗೆ ಕೋರಲಾಗಿದೆ ಎಂದಿದ್ದಾರೆ.