ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೈತರ ಖರೀದಿ ಬಲು ಜೋರು

Vishwanath S
Updated On : 23 Jun 2013, 11:37 am

ಚಿತ್ತಾಪುರ: ತಾಲೂಕಿನ ರೈತರು ಭಾನುವಾರ ನಡೆಯುವ ಕಾರ ಹುಣ್ಣಿಮೆ ನಿಮಿತ್ತ ತಮ್ಮ ಎತ್ತುಗಳಿಗೆ ಶೃಂಗರಿಸಲು ಪಟ್ಣಣದ ಅಂಗಡಿಗಳ ಮುಂದೆ ಸಾಮಗ್ರಿಗಳು ಬಲು ಜೋರಾಗಿ ಖರೀದಿ ಮಾಡುವುದರಲ್ಲಿ ತೊಡಗಿದ್ದಾರೆ.
ರೈತರ ಪಾಲಿಗೆ ಕಾರ ಹುಣ್ಣಿಮೆ ವಿಶೇಷ ಹಬ್ಬ. ಅಂದು ರೈತರು ತಮ್ಮ ಎತ್ತುಗಳಿಗೆ ಮೈತೊಳೆದು ಬಣ್ಣ ಹಚ್ಚಿ, ವಿವಿಧ ಹೂ, ಬಟ್ಟೆಯ ಅಲಂಕಾರಗೊಳಿಸಿ ಸಿಂಗರಿಸಲಾಗುವುದು. ನಂತರ ಪಟ್ಟಣ ಹಾಗೂ ಗ್ರಾಮಗಳ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮಾಡುತ್ತಾರೆ.
ಅಂದು ರೈತರು ಅತಿ ಉಲ್ಲಾಸದಿಂದ ಸಿಹಿ ಊಟ ಮಾಡುತ್ತಾರೆ. ಎತ್ತುಗಳ ಶೃಂಗಾರಕ್ಕೆ ಸ್ಪರ್ಧೆ ಏರ್ಪಡಿಸುತ್ತಾರೆ. ಮೆರವಣಿಗೆಯಲ್ಲಿ ತಮ್ಮ ಎತ್ತುಗಳು ಮುಂದು, ನಮ್ಮ ಎತ್ತುಗಳು ಮುಂದು ಎನ್ನುತ್ತಾ ವಿಜೃಂಭಣೆಯಿಂದ ಕಾರ ಹುಣ್ಣಿಮೆ ಆಚರಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement