ಸಿಬಿಐ ಅಸ್ತ್ರ ಬಳಸಿದ ಕಾಂಗ್ರೆಸ್: ಪಾಟೀಲ್ ಆರೋಪ
ಸೇಡಂ: ಚುನಾವಣೆ ಸಂದರ್ಭದಲ್ಲಿ ತಮ್ಮ ಮೇಲಿರುವ ಸಿಬಿಐ ಪ್ರಕರಣವನ್ನೇ ಅಸ್ತ್ರವನ್ನಾಗಿಸಿಕೊಂಡು ಕಾಂಗ್ರೆಸ್ ನಾಚಿಕೆಗೇಡುತನ ಪ್ರದರ್ಶಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ ಆರೋಪಿಸಿದರು.
ಇಲ್ಲಿನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಬಿಜೆಪಿ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಒಳಜಗಳ, ವೈಮನಸ್ಸು ಮತ್ತು ಭಿನ್ನಮತದಿಂದ ಅಧಿಕಾರ ಕಳೆದುಕೊಳ್ಳುವಂತಾಗಿದ್ದು, ಈ ಪರಿಸ್ಥಿತಿ ಕೇಂದ್ರದಲ್ಲಿ ಬರುವುದಿಲ್ಲ. ಮುಂಬರುವ ದಿನಗಳಲ್ಲಿ ಮೋದಿ ಪ್ರಧಾನಿಯಾದಲ್ಲಿ ದೇಶದ ಮುನ್ನಡೆ ಸಾಧ್ಯ ಎಂದರು.
ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಸ್ಥಾನಿಕ ಸಮಿತಿ ರಚಿಸಲು ಮುಂದಾಗಿದ್ದು, ಪಕ್ಷದ ಬಲವರ್ಧನೆಗಾಗಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಚಿತ್ತಾಪುರ ಮಾಜಿ ಶಾಸಕ ವಾಲ್ಮೀಕಿ ನಾಯಕ, ಮುಕುಂದ ದೇಶಪಾಂಡೆ, ನಾಗೇಂದ್ರಪ್ಪ ದುಗನೂರ, ವಿಠ್ಠಲರೆಡ್ಡಿ ಕೋಲಕುಂದಾ, ಶರಣಪ್ಪ ತಳವಾರ, ಬಿ.ಆರ್. ಪಾಟೀಲ್, ಮಹ್ಮದ್ ಮುನೀಬ್ ಇದ್ದರು.
ಹರಿದಾಸ ವೈಭವಕ್ಕೆ ಇಂದು ಚಾಲನೆ
ಗುಲ್ಬರ್ಗ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಜೂನ್ 23 ಮತ್ತು 24ರಂದು ಎರಡು ದಿನಗಳ ಕಾಲ ಹರಿದಾಸರ ಹಾಡುಗಳ ಸಂಗೀತ ಸಂಭ್ರಮ ಹರಿದಾಸ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ. ಹರಿದಾಸ ಸಾಹಿತ್ಯ ವಿಚಾರ ವಾಹಿನಿ ವೇದಿಕೆ, ಸ್ವರಮಾಧುರಿ ಸಂಗೀತ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 23ರಂದು ಸಂಜೆ 6ಕ್ಕೆ ನಡೆಯುವ ಸಮಾರಂಭವನ್ನು ಈಶಾನ್ಯ ವಲಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಬರೆದಿರುವ ಶ್ರೀರಾಮದಾಸರ ಬದುಕು, ಸಾಹಿತ್ಯ ಕೃತಿಯನ್ನು ಹಿರಿಯ ಸಾಹಿತಿ ಡಾ. ಚನ್ನಣ್ಣ ವಾಲೀಕಾರ್ ಬಿಡುಗಡೆಗೊಳಿಸಲಿದ್ದಾರೆ. ಜೂ.24ರಂದು ಸಂಜೆ 6ಕ್ಕೆ ನಡೆಯುವ ಸಮಾರಂಭದಲ್ಲಿ ಹರಿದಾಸ ಸಂಗೀತ ರತ್ನ ರಾಜ್ಯ ಮಟ್ಟದ ಗೌರವ ಪ್ರಶಸ್ತಿಯನ್ನು ಬಾಲಗಕೋಟೆಯ ಅನಂತ ಕುಲಕರ್ಣಿ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.
ವರದಕ್ಷಿಣೆ ಕಿರುಕುಳ; ದೂರು
ಗುಲ್ಬರ್ಗ: ವರದಕ್ಷಿಣೆಗಾಗಿ ಮಹಿಳೆಯೊಬ್ಬಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಘಟನೆ ಪೇಠಶಿರೂರ ಗ್ರಾಮದಲ್ಲಿ ನಡೆದಿದೆ. ಶಿವರಂಜನಿ ಗಂಡ ರಾಜೇಶ ಘಾಟೆ ಎಂಬಾಕೆ ಕಿರುಕುಳಕ್ಕೆ ಒಳಗಾದವರು. 16.4.2012ರಂದು ಗ್ರಾಮದಲ್ಲಿ ಆನಂದರಾವ ಘಾಟೆ ಅವರ ಸುಪುತ್ರ ರಾಜೇಶನೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ನಂತರ ಶಿವರಂಜಿನಿಯನ್ನು ಕರೆದುಕೊಂಡು ಆಕೆಯ ಗಂಡ ರಾಜೇಶ, ಮಾವ ಆನಂದರಾವ, ಅತ್ತೆ ಶಾಂತಾ, ನಾದಿನಿಯರಾದ ಜ್ಯೋತಿ, ರಜಿತ, ಲತಾ ಎಲ್ಲರೂ ಆಂಧ್ರದ ವೆಲ್ಗಟೂರ ಗ್ರಾಮಕ್ಕೆ ಹೋಗಿ ವಾಸವಾಗಿದ್ದರು. ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ನಗ- ನಾಣ್ಯ ಕಳವು
ಗುಲ್ಬರ್ಗ: ನಗರದ ಸಾಯಿರಾಮ ನಗರದ ಮನೆಯೊಂದರ ಬಾಗಿಲು ಕೀಲಿ ಮುರಿದು ಒಳನುಗ್ಗಿ ಮನೆಯಲ್ಲಿದ್ದ 1 ಲಕ್ಷ ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋದ ಘಟನೆ ನಡೆದಿದೆ. ಹುಲಿಗಯ್ಯ ಗುತ್ತೇದಾರ ಎಂಬುವರ ಮನೆಯೇ ಕಳ್ಳತನವಾಗಿದೆ. ಬೀದರಕ್ಕೆ ಹೋಗಿರುವ ಸಂದರ್ಭದಲ್ಲಿ ಗುರುವಾರ ರಾತ್ರಿ ಕಳ್ಳರು ಬಾಗಿಲು ಕೀಲಿ ಮುರಿದು 25 ಸಾವಿರ ಮೌಲ್ಯದ ಎರಡು ಬಂಗಾರದ ಉಂಗುರ, 45 ಸಾವಿರ ಮೌಲ್ಯದ ಬಂಗಾರದ ಬಿಸ್ಕಟ್, 6 ಸಾವಿರ ಮೌಲ್ಯದ ಬೆಳ್ಳಿ ಗ್ಲಾಸುಗಳು, 2 ಸಾವಿರ ಮೌಲ್ಯದ ಬೆಳ್ಳಿಯ ಪ್ಲೇಟುಗಳು ಮತ್ತು ನಗದು 19 ಸಾವಿರ, ಒಟ್ಟು ಒಂದು ಲಕ್ಷ ಮೌಲ್ಯದ ವಸ್ತುಗಳು ದೋಚಿಕೊಂಡು ಹೋಗಿದ್ದಾರೆ.

ರಾಜ್ಯ ಕೃಷಿ ಮಾರಾಟ ಮಂಡಳಿಗೆ ಕ್ಯಾತನಾಳ್ ಆಯ್ಕೆ
ಯಾದಗಿರಿ: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಸದಸ್ಯರಾಗಿ ಇಲ್ಲಿನ ಎಪಿಎಎಂಸಿ ಅಧ್ಯಕ್ಷ ಭೀಮನಗೌಡ ಕ್ಯಾತನಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೂ.14ರಂದು ಈ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಜಿಲ್ಲೆಯಿಂದ ಏಕೈಕ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ಧ ಕ್ಯಾತನಾಳ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ಜಿಲ್ಲೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಜಯ ಕರ್ನಾಟಕ ಜಿಲ್ಲಾಧ್ಯಕ್ಷರ ನೇಮಕ
ಯಾದಗಿರಿ: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಅದೇಶದ ಮೇರೆಗೆ ಜಿಲ್ಲಾಧ್ಯಕ್ಷರನ್ನಾಗಿ ತೇಜಾರಾಜ ರಾಠೋಡ ಅವರನ್ನು ರಾಜ್ಯಾಧ್ಯಕ್ಷ ಎಂ. ಕೋರಳ್ಳಿ ನೇಮಕ ಮಾಡಿ ಅದೇಶ ಹೋರಡಿಸಿದ್ದಾರೆ. ತಕ್ಷಣ ಸಂಘಟನೆ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ ಉಳಿವಿಗಾಗಿ ಶ್ರಮಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಸಂಚಾಲಕ ವೆಂಕಟೇಶ ತುಳೇರ್, ಕೃಷ್ಣಮೂರ್ತಿ ಕುಲಕರ್ಣಿ, ವಿಶ್ವನಾಥ ಶೆಟ್ಟಿ, ಶಿವರಾಜ ನಾಡಗೌಡ, ಸುನೀಲ್ ರಾಠೋಡ್, ಗುರುರಾಜ್ ಯಕ್ಷಿಂತಿ, ನಂದರಾಜ ಗುಂಜನೂರ, ಮಲ್ಲಿಕಾರ್ಜುನ ಚಾಲಿಬೆಂಚಿ, ಹಣಮಂತ ಕೋಟಗೇರಾ, ವಿಕ್ರಮ ಚವ್ಹಾಣ, ಭಿಮಾಶಂಕರ ತಡಿಬಿಡಿ, ಹಣಮಂತರಾಯ, ಅಂಬೇಶ ನಾಯಕ ಇದ್ದರು.
'ಜವಳಿ ಪಾರ್ಕ್ಗೆ ಸಾವಿರ ಕೋಟಿ'
ಮಂಗಳೂರು: ಯಾದಗಿರಿಯಲ್ಲಿ 1ಸಾವಿರ ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಜವಳಿ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಒಟ್ಟು 3,300 ಎಕರೆ ಜಮೀನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಇದರಲ್ಲಿ ಜವಳಿ ಫಾರ್ಮ್ಗೆ ಒಂದು ಸಾವಿರ ಎಕರೆ ಜಾಗ ಮೀಸಲು ಇರಿಸಲಾಗಿದೆ. ಇದರಿಂದ ಹೈದರಾಬಾದ್ ಕರ್ನಾಟಕ ಜನರಿಗೆ, ಉದ್ಯೋಗ ಜತೆಗೆ ನೇಕಾರರಿಗೆ ವಿಫುಲ ಆವಕಾಶ ಲಭ್ಯವಾಗಲಿದೆ. ಅಲ್ಲಿ 40ರಿಂದ 50 ಸಾವಿರ ಮಂದಿ ಉದ್ಯೋಗಕ್ಕಾಗಿ ವಲಸೆ ಹೋಗಿದ್ದಾರೆ ಎಂದರು.
ರಾಷ್ಟ್ರಪತಿ ಅಂಕಿತಕ್ಕೆ ಬಿಲ್: ಕರ್ನಾಟಕ ಮೆರೆಟೈಮ್ ಬಿಲ್ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ. ಮೀನುಗಾರಿಕೆ ಬಂದರು ಮೂರನೇ ಹಂತದ ಕಾಮಗಾರಿ ಶೇ.25 ಮುಗಿದಿದೆ. 1080 ಮೀಟರ್ ಉದ್ದ ಜೆಟ್ಟಿ ನಿರ್ಮಾಣ ನಡೆಯಲಿದ್ದು, 425 ಅಡಿ ಡಯಾಫ್ರಂ ಹಾಕಲಾಗಿದೆ ಎಂದರು.
ಟಿಪ್ಪು ಸೌಹಾರ್ದತೆ
ಉಳ್ಳ ಅರಸ
ಸುರಪುರ: ಮೈಸೂರು ಹುಲಿ ಎಂದೇ ಖ್ಯಾತನಾಗಿದ್ದ ಟಿಪ್ಪು ಸುಲ್ತಾನ ಕೋಮು ಸೌಹಾರ್ದತೆ ಮೆರೆದ ಅರಸು. ಆತನ ಹೆಸರಿನಲ್ಲಿ ರಾಜ್ಯ ಮಟ್ಟದ ಮುಸ್ಲಿಂ ಯುವ ಸೇನೆ ರಚಿಸಿರುವುದು ಸ್ವಾಗತಾರ್ಹ. ಸಂಘ ಹಿಂದುಳಿದ ಮುಸ್ಲಿಂ ಜನಾಗಂದ ಅಭಿವೃದ್ಧಿ ದೃಷ್ಟಿಯಿಂದ ಕಾರ್ಯನಿರ್ವಹಸಲಿ ಎಂದು ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ ಕರೆ ನೀಡಿದರು.ಪಟ್ಟಣದ ಗಾಂಧಿ ನಗರದಲ್ಲಿ ಟಿಪ್ಪು ಸುಲ್ತಾನ ಮುಸ್ಲಿಂ ಯುವ ಸೇನೆ ಕೇಂದ್ರ ಕಚೇರಿ ಉದ್ಘಾಟಿಸಿದರು. ಉರ್ದು ಸಾಹಿತಿ ಎಕ್ಬಾಲ್ ಅಹ್ಮದ್ ರಾಹಿ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಿದ ರಾಜರಲ್ಲಿ ಟಿಪ್ಪು ಮುಂಜೂಣಿ ಸಾಲಿನಲ್ಲಿದ್ದಾರೆ ಎಂದರು.