ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೊಸ ಪರವಾನಗಿಗೆ ವಿರೋಧ: ಪ್ರತಿಭಟನೆ

Vishwanath S
Updated On : 23 Jun 2013, 11:35 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.22
ಹೊಸ ಹೆಂಡದ ಅಂಗಡಿಗಳಿಗೆ ಪರವಾನಿಗೆ ನೀಡುತ್ತಿರುವುದನ್ನು ಖಂಡಿಸಿ ವೀರ ಕನ್ನಡಿಗರ ಸೇನೆಯ ಕಾರ್ಯಕರ್ತರು ಶನಿವಾರ ನಗರದಲ್ಲಿ ಮದ್ಯದ ಬಾಟಲಿಯೊಂದಿಗೆ ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ಈಗಾಗಲೇ ರಾಜ್ಯಾದ್ಯಂತ ಹೆಂಡದ ಅಂಗಡಿಗಳು ಚಹಾ ಅಂಗಡಿಯಂತೆ ಮೂಲೆ ಮೂಲೆಯಲ್ಲಿ ಹೆಚ್ಚಾಗಿ ಹೋಗಿವೆ. ಇದರಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ದಿಢೀರನೆ ಅಗ್ಗದ ದರದಲ್ಲಿ ವಿತರಣೆ ಮಾಡಲು ಹೊಸ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ಮುಖ್ಯಮಂತ್ರಿಗಳು ಹೊಸ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ನಿರ್ಧಾರ ಕೈಬಿಡಬೇಕು. ಇಲ್ಲವಾದರೆ ಮತ್ತಷ್ಟು ಬಡ ಕುಟುಂಬಗಳು ಬೀದಿ ಪಾಲಾಗಿವೆ ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
  ಸೇನೆಯ ಅಧ್ಯಕ್ಷ ಅಮೃತ ಪಾಟೀಲ್ ಸಿರನೂರ, ಮುಖಂಡರಾದ ಜಗನ್ನಾಥ ಸೂರ್ಯವಂಶಿ, ರವಿ ಒಂಟಿ, ದತ್ತು ಭಾಸಗಿ, ಸಂತೋಷ ತಳವಾರ, ಶಿವಾಜಿ ಚವ್ಹಾಣ, ಅಮೀತ ಪಾಟೀಲ್, ಅಬ್ದುಲ್ ವಾಜೀದ್ ಖಾನ್, ಯಲ್ಲಾಲಿಂಗ, ಸುನೀಲ ಚವ್ಹಾಣ, ಸಿದ್ದು ಕಂದಗಲ್, ರಾಮಾ ಪೂಜಾರಿ, ಪ್ರಶಾಂತ ಚವ್ಹಾಣ, ಹಣಮಂತ ಜಾಧವ, ಉದಯ ಕಟ್ಟಿಮನಿ, ರಾಜು ಕಣ್ಣುರು ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮದ್ಯ ಮಾರಾಟ ಪರವಾನಗಿಗೆ ಖಂಡನೆ
ಗುಲ್ಬರ್ಗ: ಹೊಸದಾಗಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿರುವ ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆ, ಕೂಡಲೇ ಈ ನಿರ್ಣಯ ಕೈಬಿಡಬೇಕು ಎಂದು ಒತ್ತಾಯಿಸಿದೆ.
ರಾಜ್ಯ ಸರ್ಕಾರದ ಬೊಕ್ಕಸ ತುಂಬುವ ನೆಪದಲ್ಲಿ ಕುಟುಂಬಗಳನ್ನು ನಾಶ ಮಾಡಲು ಹೊರಟಿದೆ ಎಂದು ಜಿಲ್ಲಾಧ್ಯಕ್ಷ ರಮೇಶ ಸರಡಗಿ ಆರೋಪಿಸಿದ್ದಾರೆ. ಕೂಡಲೇ ಮದ್ಯಪಾನ ನಿಷೇಧಿಸಿ ಬಡ ಕುಟುಂಬದ ನೆರವಿಗೆ ಬರಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement