ಕೋಟಿ ಖರ್ಚಾದರೂ ಕಾಣುತ್ತಿಲ್ಲ ಗುಣಾತ್ಮಕ ಶಿಕ್ಷಣ: ಹುಡಗಿ ವಿಷಾದ
ಕನ್ನಡಪ್ರಭ ವಾರ್ತೆ , ಜೇವರ್ಗಿ , ಜೂ.23
ಇಂದಿನ ಸರ್ಕಾರಗಳು ಶಿಕ್ಷಣಕ್ಕಾಗಿ ಬದಲಾವಣೆ ತಂದು ಕೋಟಿ ಕೋಟಿ ಹಣ ಸುರಿದರು ಪದ್ಧತಿಯಲ್ಲಿ ಗುಣಾತ್ಮಕವಾದ ಶಿಕ್ಷಣ ಸಿಗುತಿಲ್ಲ ಎಂದು ಪ್ರೊ. ಹುಡಗಿ ಅಭಿಪ್ರಾಯಪಟ್ಟರು.
ತಾಲೂಕಿನ ಸೊನ್ನ ಶಿವಾನಂದ ಶಿವಯೋಗಿ ಗ್ರಾಮಿಣ ಜನ ಕಲ್ಯಾಣ ಶಿಕ್ಷಣ ಸಂಸ್ಧೆಯ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ ಶಿವಾನಂದ ಶ್ರೀಗಳು ತರಬೇತಿ ಪಡೆದ ಶಿಕ್ಷಕರು ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರಾಗಿ ಸಮಾಜ ಕಟ್ಟುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ತರಬೇತಿ ಪಡೆದವರೆಲ್ಲರಿಗೂ ಹಾರೈಸಿ ಆಶೀರ್ವಚನೆ ನೀಡಿದರು. ಪ್ರಾಚಾರ್ಯ ಸದನಂದ ಪಾಟೀಲ ವಿದ್ಯಾರ್ಥಿಗಳಿಗೆ ಕಲಿತ ಪಾಠ ಕಲಿಸಿದ ಗುರಿವಿನ ಶಿಕ್ಷಣ ಮತ್ತೊಬ್ಬರಿಗೆ ಹಂಚಿ ಉತ್ತಮ ಶಿಕ್ಷಕರಾಗಲು ಕರೆ ನೀಡಿದರು.
ವಿದ್ಯಾರ್ಥಿಗಳ ಪರವಾಗಿ ಅಕ್ಷತಾ ಕುಲಕರ್ಣಿ ಮತ್ತು ನಾಗಮ್ಮ ಕಲ್ಲ ಹಂಗರಗಾ ಮಾತನಾಡಿ, ತರಬೇತಿ ಶಾಲೆಯ ಅನುಭವಗಳನ್ನು ಹಂಚಿಕೂಂಡರು. ಪ್ರಿಯಂಕ ಹೀರೇಮಠ ಸ್ವಾಗತಿಸಿ, ನಾಗರಾಜ ವಂದಿಸಿದರು. ಜಯಶ್ರೀ ಹಿರೇಮಠ ನಿರೂಪಿಸಿದರು. ಶಿಕ್ಷಕರಾದ ಡಿ.ಬಿ. ಗೂಡೂರ, ಎಚ್.ಎಂ. ಹರವಾಳ, ಕೆ. ಪುಲಶೆಟ್ಟಿ, ಮಲ್ಲುಗೌಡ ಪಾಟೀಲ, ಬಸಯ್ಯ ಶಿವಮಠ ಸೇರಿದಂತೆ ಅನೇಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.