ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀರು ವ್ಯರ್ಥ ಮಾಡಿದರೆ ನಮ್ಮ ಭವಿಷ್ಯ ನಾಶ

Vishwanath S
Updated On : 24 Jun 2013, 11:25 am

ಗುಲ್ಬರ್ಗ/ಶಹಾಬಾದ್: ನೀರು ಪ್ರತಿಯೊಬ್ಬರ ಜೀವನಾಮೃತವಾಗಿದೆ. ಅದನ್ನು ವ್ಯರ್ಥ ಮಾಡಿದರೆ ನಮ್ಮ ಭವಿಷ್ಯ ನಾಶವಾಗುವುದು. ಮುಂದಿನ ದಿನಗಳಲ್ಲಿ ಶುದ್ಧ ನೀರಿಗಾಗಿಯೇ ಮೂರನೇ ಜಾಗತೀಕ ಯುದ್ಧವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಪ್ರಕಾಶ ಗೋಷ್ಠಿ ಎಚ್ಚರಿಕೆ ನೀಡಿದರು.
ನಗರದ ಹಳೆ ಶಹಾಬಾದ್ ಬಡಾವಣೆಯಲ್ಲಿ ವಾರ್ಡ್ 1ರಿಂದ 3ರವರೆಗಿನ ಸಾರ್ವಜನಿಕರಿಗೆ ನೀರಿನ ಬಳಕೆ, ಒಳ ಚರಂಡಿಯ ಮಹತ್ವ ಕುರಿತು ಜಾಗೃತಿ ಕುರಿತು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ನಿ) (ಕೆಯುಐಡಿಎಫ್‌ಸಿ), ಏಷ್ಯಾ ಅಭಿವೃದ್ಧಿಬ್ಯಾಂಕ್, ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮ (ಎನ್‌ಕೆಯುಎಸ್‌ಐಪಿ) ಅಡಿಯಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ವಾರ್ಡ್ ಮಟ್ಟದಲ್ಲಿ ನೀರು, ಒಳಚರಂಡಿ ಕುರಿತು ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರ ರಂಗಯ್ಯ ಬಡಿಗೇರ ಮಾತನಾಡಿ, 8.33 ಕೋಟಿ ವೆಚ್ಚದಲ್ಲಿ ಪ್ರತಿ ಮನೆಗೆ 24/7 ನೀರು ಸರಬರಾಜು ಮಾಡಲಾಗುವುದು. ಮೀಟರ್ ಮೂಲಕ ಬಳಸಿದ ನೀರಿಗೆ ಕರ ವಿಧಿಸಲಾಗುವುದು. ಇದರಿಂದ ಶುದ್ಧ ನೀರು, ನೀರಿನ ಉಳಿತಾಯ ಆಗಲಿದೆ ಎಂದರು. ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ ಮಾತನಾಡಿದರು. ಮುಖಂಡರಾದ ಸುಧಾಕರ ಮಾಲಿಪಾಟೀಲ್, ಶ್ರೀಶೈಲ್ ಬೆಳಮಗಿ, ಹಂಪಣ್ಣ ಪೋತನಕರ್ ಉಪಸ್ಥಿತರಿದ್ದರು. ನಗರಸಭೆ ಪರಿಸರ ಅಭಿಯಂತರರು, ನಗರಸಭೆ ನೂತನ ಸದಸ್ಯರಾದ ಸಾಬಣ್ಣ ಬೆಳಗುಂಪಿ, ನೀಲಮ್ಮ ಜಾಯಿ, ದಾನೇಶ್ವರಿ ವಳಸಂಗರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯೋಜನಾಧಿಕಾರಿ ವೀಲಿಯಮ್ಸ್ ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ಸಂಘಟಕಿ ಸುನೀತಾ ಸ್ವಾಗತಿಸಿದರು. ಲಿಂಗರಾಜ ಹೀರಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement