ಶರಣರ ಧ್ಯೇಯೋದ್ದೇಶ ಕಲ್ಯಾಣ ರಾಜ್ಯ: ವಿಶ್ವನಾಥ ಶ್ರೀ
ಕನ್ನಡಪ್ರಭ ವಾರ್ತೆ , ಆಳಂದ , ಜೂ.23
ಬಸವಾದಿ ಶರಣರ ಸಮಾಜ ಪರಿವರ್ತನೆ ಧ್ಯೇಯೋದ್ದೇಶ ಪ್ರತಿಯೊಬ್ಬರು ಅರ್ಥಮಾಡಿಕೊಂಡು ನಡೆದರೆ ಕಲ್ಯಾಣ ರಾಜ್ಯ ನಿರ್ಮಾಣದ ಕನಸು ನನಸಾಗುತ್ತದೆ ಎಂದು ಉಸ್ತುರಿ-ಧುತ್ತರಗಾಂವ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ಪಟ್ಟಣದ ಹೆಬಳಿ ರಸ್ತೆಯ ವಿಜಯಲಕ್ಷ್ಮೀ ಮಲ್ಲಪ್ಪ ಹತ್ತರಕಿ ಅವರ ನಿವಾಸದಲ್ಲಿ ಬಸವ ಕೇಂದ್ರ, ಬಸವ ಮಾರ್ಗ ಪ್ರತಿಷ್ಠಾನ ಆಶ್ರಯದಲ್ಲಿ ಜರುಗಿದ ಮನೆಯಲ್ಲಿ ಮಹಾಮನೆ ಹಾಗೂ ವಚನ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಮಾತನಾಡಿ, ಪೂಜೆಗಿಂತ ಕಾಯಕವೇ ಮುಖ್ಯವಾಗಿದೆ ಎಂದು ಸಾರಿದ ಶರಣರು ಜಾತಿ, ಮೇಲು ಕೀಳನ್ನೆದೆ ಅದನ್ನು ಹೊಡೆದೊಡಿಸಲು ಪ್ರಯತ್ನಿಸಿದರು ಎಂದರು.
ಗುಲ್ಬರ್ಗ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ್, ಜಿಪಂ ಸದಸ್ಯೆ ಪೂಜಾ ರಮೇಶ ಲೋಹಾರ, ವಿಶ್ವರಾಧ್ಯ ಸತ್ಯಂಪೇಟೆ, ಆರ್.ಕೆ. ಪಾಟೀಲ್, ಬಾಬುರಾವ ಮಡ್ಡೆ, ಸುಮಿತ್ರಾ ಸೋಮನಾಥ ಝಳಕೋಟಿ, ಭೀಮಾಶಂಕರ ಜಮಗಿ, ದಯಾನಂದ ಶೇರಿಕಾರ, ಸಿದ್ಧರಾಮ ನಂದಗಾಂವ, ಭೀಮಾಶಂಕರ ಹಡಪದ, ರಮೇಶ ಬಿಲಗುಂದಿ, ಚಂದ್ರಕಾಂತ ಘೋಡಕೆ, ಎಸ್.ಡಿ. ಸಾಗರಶೆಟ್ಟಿ, ವಿಶ್ವನಾಥ ಭಕರೆ, ರೇವಣಸಿದ್ದಪ್ಪ ನಾಗೂರೆ ಇತರರು ಪಾಲ್ಗೊಂಡಿದ್ದರು.
ವಿಜಯಲಕ್ಷ್ಮೀ ಮಲ್ಲಿನಾಥ ಹತ್ತರಕಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಲಾವಿದ ಶಿವಶರಣಪ್ಪ ಪೂಜಾರಿ ಮತ್ತು ಬಸವರಾಜ ಅಳಂದ ವಚನ ಸಂಗೀತ ನಡೆಸಿಕೊಟ್ಟರು. ಪ್ರಭಾಕರ್ ಸಲಗರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ್ ಮಾಡಿಯಾಳ ಕಾರ್ಯಕ್ರಮ ನಿರೂಪಿಸಿದರು. ಡಿ.ಎಂ. ಪಾಟೀಲ್ ಸ್ವಾಗತಿಸಿದರು. ಗುರುಲಿಂಗಯ್ಯ ಅಳೋಳ್ಳಿಮಠ ವಂದಿಸಿದರು.