ಸಮಾನತೆಯಿಂದ ನೆಮ್ಮದಿ: ಸಿದ್ದಲಿಂಗಶ್ರೀ
ಚಿತ್ತಾಪುರ: ಸಾಮಾಜಿಕ, ರಾಜಕೀಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆಯಿಂದ ಕೂಡಿ ನಡೆದಾಗ ಮಾತ್ರ ಜೀವನದಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಪೇಠಶೀರೂರದ ಸಿದ್ದಲಿಂಗ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ಕೊಲ್ಲೂರ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದು ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದರು.
ಗ್ರಾಪಂ ಸದಸ್ಯ ಕೃಷ್ಣಾರೆಡ್ಡಿ ಹಿರಡ್ಡಿ ಮೆರವಣಿಗೆ ಚಾಲನೆ ನೀಡಿದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸಿ. ರಂಗನ್, ಶರಬಣ್ಣಗೌಡ ಹಿರಡ್ಡಿ, ಗ್ರಾಪಂ ಅಧ್ಯಕ್ಷೆ ಜಗದೇವಿ, ಮುಖಂಡರಾದ ಭೀಮಾಶಂಕರ ತೇಲ್ಕರ್, ಭಾಗಪ್ಪ ಯಾದಗಿರ, ಭೀಮು ಪ್ಯಾಟಿ, ಶಿವಯೋಗಿ ದೇವಿಂದ್ರಕರ್, ಎಎಸ್‌ಐ ಮನೋಹರ ಭಯ್ಯ ಇತರರು ಉಪಸ್ಥಿತರಿದ್ದರು.