ಸಿಇಟಿ ಪ್ರಕ್ರಿಯೆ ಮುಂದೂಡಿ: ಆಗ್ರಹ
ಗುಲ್ಬರ್ಗ: ಕಲಂ 371 (ಜೆ) ಮಸೂಧೆ ಹಿನ್ನೆಲೆಯಲ್ಲಿ ವೃತ್ತಿಪರ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳ ಹಂಚಿಕೆಗೆ ಆಗ್ರಹಿಸಿರುವ ಹೈ.ಕ. ಹೋರಾಟ ಸಮಿತಿ ಈ ಬೇಡಿಕೆ ಈಡೇರಿಕೆಗಾಗಿ ಈಗ ಆರಂಭವಾಗಿರುವ ಸಿಇಟಿ ಪ್ರಕ್ರಿಯೆಯನ್ನೇ ಮುಂದೂಡಲು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಭಾನುವಾರ ನಗರದ ಕನ್ನಡ ಭವನದಲ್ಲಿ ಹೈ ಕ. ಹೋರಾಟ ಸಮಿತಿ ಪದಾಧಿಕಾರಿಗಳ, ಈ ಭಾಗದ ಸಿಇಟಿ ಬರೆದ ವಿದ್ಯಾರ್ಥಿಗಳ ಪಾಲಕರು, ಚಿಂತಕರನ್ನೊಳಗೊಂಡು ನಡೆದ ಸಭೆಯಲ್ಲಿ ಈ ಕುರಿತಂತೆ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ.