ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಿಡಿಲಿಗೆ ಬಲಿ; ಪರಿಹಾರ ಚೆಕ್ ವಿತರಣೆ

Vishwanath S
Updated On : 24 Jun 2013, 11:29 am

ಜೇವರ್ಗಿ: ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿಗಳ ಕುಟುಂಬ ವರ್ಗಕ್ಕೆ ಶನಿವಾರ ಶಾಸಕ ಡಾ. ಅಜಯಸಿಂಗ್ ಅವರು ಪರಿಹಾರ ಚೆಕ್ ವಿತರಿಸಿದರು.
ತಾಲೂಕಿನ ಕಡಕೋಳ ಗ್ರಾಮದ ಕೃಷ್ಣಪ್ಪ ತಂದೆ ಬಸಣ್ಣ ಹಾಗೂ ರಾಜವಾಳ ಗ್ರಾಮದ ಬಸವರಾಜ ತಂದೆ ಸಂಗಣ್ಣ ಅವರ ಕುಟುಂಬ ವರ್ಗಕ್ಕೆ ತಲಾ 1.50 ಲಕ್ಷ ಮೌಲ್ಯದ ಚೆಕ್ ಸರ್ಕಾರದಿಂದ ವಿತರಿಸಿದರು. ಕುಕನೂರಿನ ಸಾಯಿಬಣ್ಣ ತಳವಾರ ಎಂಬುವವರಿಗೆ ಸೇರಿದ 6 ಕುರಿ ಸಿಡಿಲಿಗೆ ಬಲಿಯಾಗಿದ್ದರಿಂದ 6,600 ಮೌಲ್ಯದ ಚೆಕ್ ವಿತರಿಸಿದರು.
ತಹಸೀಲ್ದಾರ್ ಎಂ.ಎನ್. ಗೋಠೆ, ಖಾಸಿಂಪಟೇಲ್ ಮುದಬಾಳ, ರಾಜಶೇಖರ ಸೀರಿ, ರಹೆಮಾನ್ ಪಟೇಲ್, ವಸಂತ ನರಿಬೋಳ, ರಶೀದ್ ನಮಾಜಿ, ರಾಜಶೇಖರ ಖಣದಾಳ, ಸಿದ್ದು ಯಂಕಂಚಿ, ಸಿದ್ದಲಿಂಗ ಬಳ್ಳುಂಡಗಿ, ಶ್ರೀಮಂತ ಧನ್ನಕರ್, ಮರೆಪ್ಪ ಸರಡಗಿ, ಎಂ.ಡಿ. ಹನೀಫ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement