ಹಿಂದೂ ಸಾಮ್ರಾಜ್ಯೋತ್ಸವ ಆಚರಣೆ
ಆಳಂದ: ಆಳಂದ ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಏರ್ಪಡಿಸಿದ್ದ ಹಿಂದೂ ಸಾಮ್ರಾಜೋತ್ಸವ ಸಮಾರಂಭಕ್ಕೆ ಗಣವೇಷಧಾರಿಗಳು ಮತ್ತು ಧುರೀಣರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮವತಾರ ತಾವರ ಮಾತನಾಡಿ, ದೇಶಾದ್ಯಂತ ಸಂಘವು ದೇಶಾಭಿಮಾನ, ಸಂಸ್ಕೃತಿ ಪರಂಪರೆಯನ್ನು ಯುವ ಜನಾಂಗದಲ್ಲಿ ನಿರಂತರವಾಗಿ ಪ್ರಚಾರ ಪ್ರಸಾರ ಕೈಗೊಳ್ಳುತ್ತ ಬರಲಾಗಿದೆ. ಗಂಡಾಂತರದಿಂದ ದೇಶ ಉಳಿಸಲು ಯುವಕರು ಸಜ್ಜಾಗಬೇಕು ಎಂದರು. ಆಳಂದ ಕಾರ್ಯವಾಹಕ ಶರಣು ಕುಂಬಾರ ಮಾತನಾಡಿ, ಶಿವಾಜಿ ಮಹಾರಾಜರ ಹಿಂದುತ್ವಕ್ಕಾಗಿ ಮಾಡಿದ ಕಾರ್ಯಸಾಧನೆಗಳು ವಿವರಿಸಿದರು. ಸಂಘಕ್ಕಾಗಿ ಯುವಕರು ದುಡಿಯಲು ಮುಂದೆ ಬರಬೇಕು ಎಂದರು. ಪ್ರವೀಣ ಚಿಲ್ಲಾಳ, ರವಿ ಚವ್ಹಾಣ, ಮಹಾದೇವ ಇಂಗಳೆ, ಬಿ.ಎಂ. ಕುಲಕರ್ಣಿ, ಪಂಕಜ ಘಂಟೆ, ಗೋವಿಂದ ಕಾಂಬಳೆ ಇತರರು ಭಾಗವಹಿಸಿದ್ದರು. ಸಹದೇವ ಇಂಗಳೆ ಕಾರ್ಯಕ್ರಮ ನಿರೂಪಿಸಿದರು. ತಿಪ್ಪೇರುದ್ರ ಸ್ವಾಮಿ ಮಠಪತಿ ವಂದಿಸಿದರು.