ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ಹಾಸ್ಟೆಲ್ ನೌಕರರ ಧರಣಿ

Lingaraj Badiger
Updated On : 25 Jun 2013, 11:56 am

ಗುಲ್ಬರ್ಗ: ಜಿಲ್ಲೆಯ ಸಮಾಜ ಕಲ್ಯಾಣ, ಬಿಸಿಎಂ, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರ ವೇತನದಲ್ಲಿ ಕಡಿತಗೊಂಡ ಈಪಿಎಫ್ ಹಣ ಕಾರ್ಮಿಕ ಖಾತೆಗೆ ಜಮಾ ಮಾಡಲು ಒತ್ತಾಯಿಸಿ ಜಿಲ್ಲಾ ಹಾಸ್ಟೆಲ್ ದಿನಗೂಲಿ ನೌಕರರ ಸಂಘ ಜೂ.25ರಂದು ಗುಲ್ಬರ್ಗದ ಕಾರ್ಮಿಕ ಇಲಾಖೆ ಎದುರು ಧರಣಿ ಹಮ್ಮಿಕೊಂಡಿದೆ. ಈ ನೌಕರರಿಗೆ ಕಳೆದ ನಾಲ್ಕು ವರ್ಷಗಳಿಂದ ಎನ್‌ಜಿಒಗಳ ಮೂಲಕ ವೇತನ ಪಾವತಿಸಲಾಗುತ್ತಿದೆ. ಆದರೆ, ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಕೊಡದೇ ತಮ್ಮ ಮನಸ್ಸಿಗೆ ಬಂದ ಹಾಗೆ ಅತ್ಯಂತ ಕಡಿಮೆ ವೇತನ ಪಾವತಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಕಾರ್ಯದರ್ಶಿ ಅಶೋಕ ಮ್ಯಾಗೇರಿ ಆರೋಪಿಸಿದ್ದಾರೆ. ವೇತನದಲ್ಲಿ ಕಡಿತ ಮಾಡಿದ ಇಪಿಎಫ್ ಹಣ ಕಾರ್ಮಿಕರ ಖಾತೆಗೆ ಜಮಾ ಮಾಡದೆ ಮೋಸ ಮಾಡಲಾಗುತ್ತಿದೆ. ವೇತನವನ್ನು 8ರಿಂದ 10 ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ವೇತನ ಕೇಳಿದರೆ ಕೆಲಸದಿಂದ ತೆಗೆದು ಹಾಕುವ ಪ್ರಕ್ರಿಯೆ ಮುಂದುವರಿದಿದೆ. ಈ ಕ್ರಮ ವಿರೋಧಿಸಿ ಜೂ.25ರಂದು ಧರಣಿ ನಡೆಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸಬೇಕು ಎಂದು ಪ್ರಕಟಣೆ ಮೂಲಕ ಕೋರಿದ್ದಾರೆ.
ಇಂದು ವಿದ್ಯುತ್ ಪೂರೈಕೆ ವ್ಯತ್ಯಯ
ಗುಲ್ಬರ್ಗ: ಗುಲ್ಬರ್ಗದ 11 ಕೆವಿ ಜಯನಗರ ಮತ್ತು 11 ಕೆವಿ ಜಿ.ಜಿ.ಎಚ್. ಫೀಡರಿನ ತುರ್ತು ದುರಸ್ತಿ ಕಾರ್ಯವನ್ನು ಜೂ. 25ರಂದು ನಿರ್ವಹಿಸಲಾಗುವುದು. ಈ ಪ್ರಯುಕ್ತ ಅಂದು ಮಧ್ಯಾಹ್ನ 1.30 ರಿಂದ ಸಂಜೆ 5.30 ಗಂಟೆಯವರೆಗೆ ಮುಂದೆ ತೋರಿಸಿರುವ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಅರಿಯಂತನಗರ, ಜಯನಗರ, ಓಕಳಿಕ್ಯಾಂಪ್, ಬಸವೇಶ್ವರ ಆಸ್ಪತ್ರೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಸೂರ್ಯನಗರ, ತಿಲಕನಗರ, ತೇಲಕರ್ ಲೇ ಔಟ್, ಪೂಜಾ ಕಾಲೋನಿ, ಜಿಡಿಎ ಲೇಔಟ್, ವಿಶ್ವೇಶ್ವರಯ್ಯ ಕಾಲೋನಿ, ಆಂಜನೇಯ ನಗರ, ಪಿಡಬ್ಯೂಡಿ ಕ್ವಾರ್ಟರ್ಸ, ಕೆಜಿಬಿ ಬ್ಯಾಂಕ್, ಪ್ರಶಾಂತನಗರ(ಎ), ಡೆಂಟಲ್ ಕಾಲೇಜ್.
ಉಚ್ಚಾಟನೆಯಾದ
ಪಾವಗಡ ಶ್ರೀರಾಮ
ಗುಲ್ಬರ್ಗ: ಕರ್ನಾಟಕ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಇವರ ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ಮಾದಿಗ ದಂಡೋರ ರಾಜ್ಯ ಶಾಖೆಗೆ ಅಧ್ಯಕ್ಷರಾಗಿದ್ದ ಪಾವಗಡ ಶ್ರೀರಾಮ ಅವರನ್ನು ಸಂಘಟನೆಯಿಂದ ಉಚ್ಚಾಟಿಸಲಾಗಿದೆ ಎಂದು ಮಾದಿಗ ದಂಡೋರದ ಸಂಸ್ಥಾಪಕ, ಅಧ್ಯಕ್ಷ ಮಾಪಣ್ಣ ಹದನೂರ ತಿಳಿಸಿದ್ದಾರೆ. ಶ್ರೀರಾಮ ಅವರು ನಿರ್ಮಿಸಿದ ರಾಜ್ಯ ಸಮಿತಿ, ಜಿಲ್ಲಾ ಸಮಿತಿಯನ್ನು ರದ್ದು ಮಾಡಲಾಗಿದೆ. ತಮ್ಮ ಹಿತಾಸಕ್ತಿಗೆ ಸಂಘಟನೆ ಬಳಸಿ ಕೆಜೆಪಿ ಪಕ್ಷದಿಂದ ಪಾವಗಡದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿರುವುದು ಇಡೀ ನಮ್ಮ ಸಮಾಜಕ್ಕೆ ಅವಮಾನ. ಸಂಘಟನೆಗೆ ದ್ರೋಹ ಬಗೆದು, ಸಮಾಜ ದ್ರೋಹಿ ಎಂದು ಘೋಷಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement