ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚನ್ನಪ್ಪಗೋಳ್ ಟ್ರಸ್ಟ್‌ನಿಂದ 1.75 ಲಕ್ಷ ದೇಣಿಗೆ

Lingaraj Badiger
Updated On : 25 Jun 2013, 11:59 am

ಯಾದಗಿರಿ: ಉತ್ತರಾಖಂಡ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಕೇದಾರನಾಥ, ಬದ್ರಿನಾಥ, ಸೋಮಪ್ರಯಾಗ ಸೇರಿದಂತೆ ವಿವಿಧೆಡೆ ಪ್ರವಾಹದಿಂದ ಸಾವಿರಾರು ಜನರು ನಿರಾಶ್ರಿತರಾದ ಹಿನ್ನೆಲೆಯಲ್ಲಿ ಅವರ ನೆರವಿಗೆ ಶಹಾಪುರದ ಚನ್ನಪ್ಪಗೋಳ್ ಚಾರಿಟಬಲ್ ಟ್ರಸ್ಟ್‌ನ ವತಿಯಿಂದ 1.75 ಲಕ್ಷ ಮೌಲ್ಯದ ಚೆಕ್‌ಅನ್ನು ಜಿಲ್ಲಾಧಿಕಾರಿ ಮೂಲಕ ನೀಡಲಾಯಿತು.
ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅವರ ಮುಖಾಂತರ ಉತ್ತರಾಖಂಡ ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ ಹಸ್ತಾಂತರಿಸಿದ ಟ್ರಸ್ಟ್‌ನ ಅಧ್ಯಕ್ಷ ಅಯ್ಯಣ್ಣ ಚೆನ್ನಪ್ಪಗೋಳ್ ಮಾತನಾಡಿ, ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಸ್ಥಳಗಳು ಪ್ರವಾಹದಿಂದ ತತ್ತರಿಸಿವೆ. ಕೇದಾರನಥ, ರುದ್ರಪ್ರಯಾಗ ಮತ್ತು ಬದ್ರಿನಾಥ ಪ್ರದೇಶಗಳಲ್ಲಿ ವರುಣ ರುದ್ರನರ್ತನವಾಡುತ್ತಿದ್ದಾನೆ. ಇದರಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಅನೇಕರು ನಿರಾಶ್ರಿತರಾಗಿದ್ದಾರೆ. ಅವರ ನೆರವಿಗೆ ಟ್ರಸ್ಟ್ ವತಿಯಿಂದ ಅಲ್ಪ ಕಾಣಿಗೆ ನೀಡಲಾಗುತ್ತಿದೆ ಎಂದರು.
ಉತ್ತರ ಭಾರತದಲ್ಲಿ ಸುರಿಯುತ್ತಿರುವ ಮಳೆ ಕಡಿಮೆಯಾಗಿ ಅಲ್ಲಿನ ಜನಜೀವನ ಸಹಜ ಸ್ಥಿತಿಗೆ ಬರಬೇಕಿದೆ. ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಸದಸ್ಯರಾದ ಸತ್ಯನಾರಾಯಣ ಪೋಲಂಪಲ್ಲಿ, ಮಹಾದೇವಪ್ಪ, ಮೊಹಮ್ಮದ್ ಇಸಾಕ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement