ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭೋವಿ ಸಮಾಜ ದುರ್ಬಳಕೆ: ಮನವಿ

Lingaraj Badiger
Updated On : 25 Jun 2013, 11:55 am

ಗುಲ್ಬರ್ಗ: ಅಖಿಲ ಕರ್ನಾಟಕ ಭೋವಿ ಸಮಾಜದ ವಿವಿಧೋದ್ದೇಶ ಸೇವಾ ಸಂಘದ ರಾಜ್ಯಾಧ್ಯಕ್ಷ ಅಶೋಕ ಮನೋಕರ್ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಭೋವಿ ಸಮಾಜದ ಹೆಸರಿನಲ್ಲಿ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕಾಗಿದೆ ಎಂದು ತಿಳಿಸಿದ ಅವರು, ಭೋವಿ ಸಮಾಜದ ಅಭಿವೃದ್ಧಿ ನಿಗಮಕ್ಕೆ ಸಮಾಜದವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ, ಗುಲ್ಬರ್ಗ ಹಾಗೂ ಬೆಳಗಾವಿಯಲ್ಲಿ ಸಮಾಜದ ವಸತಿ ನಿಲಯಕ್ಕಾಗಿ ತಲಾ 1 ಕೋಟಿ ಅನುದಾನ ಒದಗಿಸುವಂತೆಯೂ ಆಗ್ರಹಿಸಲಾಯಿತು ಎಂದು ಮನೋಹರ್ ತಿಳಿಸಿದರು. ನಿಯೋಗದಲ್ಲಿ ಖಜಾಂಚಿ ಹುಚ್ಚಪ್ಪ ಭೋವಿ, ಉಪ ಕಾರ್ಯದರ್ಶಿ ಯಮನಪ್ಪ ಭೋವಿ, ಜಿಲ್ಲಾಧ್ಯಕ್ಷ ಜಯಪ್ರಕಾಶ ಸಗರಕರ್ ಇದ್ದರು. ನಿಯೋಗವು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement