ಸರ್ಕಾರದ ಆದೇಶ ತಂದಿಟ್ಟ ಮತ್ತೊಂದು ಸಮಸ್ಯೆ
ಯಾದಗಿರಿ: ಆರ್ಸೆನಿಕ್ಯುಕ್ತ ನೀರಿನ ದುಷ್ಪರಿಣಾಮ ಅರಿತಿರುವ ರಾಜ್ಯ ಸರ್ಕಾರ ಅಂತಹ ಕೊಳವೆಬಾವಿಗಳ ಮುಟ್ಟುಗೋಲಿಗೆ ಆದೇಶಿಸಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಆದರೆ ಶುದ್ಧ ಕುಡಿವ ನೀರಿಗೆ ಪರ್ಯಾಯ ಕಲ್ಪಿಸದಿರುವುದು ತೀವ್ರ ಸಮಸ್ಯೆ ತಂದೊಡ್ಡಿದೆ. ಆರ್ಸೆನಿಕ್ ನೀರು ಹೊಂದಿರುವ ಕೊಳವೆಬಾವಿಗಳನ್ನು ಜೂ. 30ರೊಳಗೆ ಸೀಜ್ ಮಾಡುವಂತೆ ಸಚಿವ ಎಚ್.ಕೆ. ಪಾಟೀಲ ಅವರು ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 19 ಗ್ರಾಮಗಳಲ್ಲಿನ ಬೋರ್ವೆಲ್ಗಳಿಗೆ ಕೆಂಪುಬಣ್ಣ ಹಚ್ಚುವ ಕಾರ್ಯ ಶನಿವಾರದಿಂದಲೇ ಆರಂಭವಾಗಿದೆ. ಮುಂದೆ ಅಧಿಕ ಫ್ಲೋರೈಡ್ ಅಂಶವಿರುವ ಕೊಳವೆಬಾವಿಗಳಿಗೆ ಬಣ್ಣ ಹಚ್ಚಿ ನಿಷೇಧಿಸಲಾಗುವುದು. ಸೂಚನಾ ಫಲಕಗಳನ್ನೂ ಹಾಕಲಾಗುವುದು ಎಂದು ಡಿಸಿ ಎಫ್.ಆರ್. ಜಮಾದಾರ ತಿಳಿಸಿದ್ದಾರೆ.