29ರಂದು ವಧು-ವರರ, ಪಾಲಕರ ಮುಖಾಮುಖಿ
ಗುಲ್ಬರ್ಗ: ಬೆಂಗಳೂರಿನ ರಾಜಾಜಿನಗರದಲ್ಲಿ ಅಖಿಲ ಭಾರತ ವೀರಶೈವ ಸೇವಾ ಸಭಾ ವತಿಯಿಂದ ರಾಜ್ಯ ಮಟ್ಟದ ವೀರಶೈವ ಲಿಂಗಾಯತ, ಜಂಗಮ ವಧು-ವರರ ಮತ್ತು ಪಾಲಕರ ಮುಖಾಮುಖಿ ಕಾರ್ಯಕ್ರಮ ಜೂನ್ 29 ಹಾಗೂ 30ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ. ಅಖಿಲ ಭಾರತ ವೀರಶೈವ ಸೇವಾ ಸಭಾದ ರಾಷ್ಟ್ರೀಯ ಅಧ್ಯಕ್ಷ ರವಿ ಹಂದಿಗೋಳ ಅಧ್ಯಕ್ಷತೆ ವಹಿಸುವರು. ವೀರಶೈವ ಸಮಾಜದ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿವರಕ್ಕೆ 9448091609 ಸಂಪರ್ಕಿಸಬಹುದು.