ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವರ್ಷ ಮೂರಾದ್ರೂ ನೀಗದ ಸ್ವಚ್ಛತೆ ಸಮಸ್ಯೆ

Rashmi Kasaragodu
Updated On : 26 Jun 2013, 11:13 am

ಕನ್ನಡಪ್ರಭ ವಾರ್ತೆ, ಯಾದಗಿರಿ, ಜೂ.24
ಜಿಲ್ಲಾ ಕೇಂದ್ರವಾಗಿ ಮೂರು ವರ್ಷ ಕಳೆದರೂ ಮೂಲ ಸೌಕರ್ಯಗಳಿಲ್ಲದೆ ನಗರದ ಹಲವಾರು ಬಡಾವಣೆಗಳಲ್ಲಿ ಚರಂಡಿ ನೀರು ಮನೆ ಮುಂದೆ ಸಂಗ್ರಹವಾಗಿ ಸಾಂಕ್ರಾಮಿಕ ರೋಗಗಳ ಉತ್ಪಾದನೆ ಸ್ಥಳವಾಗಿ ಮಾರ್ಪಟ್ಟಿವೆ.
 ನಗರದ ವಾರ್ಡ್ 28ರ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ ಮದನಪುರ ಕಾಲನಿಯಲ್ಲಿ ಸೂಕ್ತ ರಸ್ತೆ ಹಾಗೂ ಚರಂಡಿಗಳಿಲ್ಲದೆ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಕಡೆ ಚರಂಡಿಗಳಿದ್ದರೂ ಹೂಳೆತ್ತದ ಕಾರಣ ತ್ಯಾಜ್ಯ ನೀರು ಸಂಗ್ರಹವಾಗಿ ರಸ್ತೆ ಮೇಲೆಯೇ ಹರಿಯುತ್ತಿದೆ. ಅಲ್ಲದೇ ದುರ್ವಾಸನೆ ಎದ್ದಿದೆ. ನಿವಾಸಿಗಳು ಮನೆ ಬಿಟ್ಟು ಹೊರಗೆ ಬಾರದಂಥ ವಾತಾವರಣ ಸೃಷ್ಟಿಯಾಗಿದೆ.
ನಾಗರಿಕರ ಆಕ್ರೋಶ: ಸ್ಥಳೀಯ ಜನತೆ ಸಮಸ್ಯೆ ಕುರಿತು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಕುಂಟು ನೆಪ ಹೇಳುತ್ತಾ ಕಾಲ ಕಳೆಯುತ್ತಿದ್ದಾರೆಂದು ಜನತೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈಗಾಗಲೇ ಮಳೆಗಾಲ ಆರಂಭವಾಗಿರುವುದರಿಂದ ಮಳೆ ನೀರು ಕೂಡ ಚರಂಡಿ ತುಂಬಿ ರಸ್ತೆ ಮೇಲೆ ಹರಿಯುತ್ತದೆ. ಬಸ್ ನಿಲ್ದಾಣದ ಬಳಿಯಿಂದ ರೇಲ್ವೆ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೂ ಕೂಡ ಇದರಿಂದ ತೊಂದರೆಯಾಗಿದೆ.
ಕೊಳಚೆ ತುಳಿದೇ ಮನೆ ಸೇರಬೇಕು: ಮನೆಗಳಿಗೆ ಹೋಗಬೇಕೆಂದರೂ ಚರಂಡಿ ನೀರನ್ನು ಮೆಟ್ಟಿಯೇ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ನಗರಸಭೆ ಏನು ಮಾಡುತ್ತಿದೆ ಎಂದು ಸಾರ್ವಜನಿಕರು ಕೇಳಿವಂತಾಗಿದೆ. ಆದ್ದರಿಂದ ಕೂಡಲೇ ಎಚ್ಚೆತ್ತುಕೊಂಡು ಅಧಿಕಾರಿಗಳು ಸಮಸ್ಯೆಗಳತ್ತ ಗಮನ ಹರಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಬೆಕೆಂದು ಕಾಳಪ್ಪ ಪಾಂಚಾಳ್, ಸಿದ್ದಣ್ಣ ದುರ್ಗದ, ಚಂದ್ರಶೇಖರ ಪಾಟೀಲ್ ಇತರರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement