ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

530 ಆಶ್ರಯ ಫಲಾನುಭವಿ ಆಯ್ಕೆಗೆ ಪ್ರಸ್ತಾವನೆ ಕೋರಿಕೆ

Lingaraj Badiger
Updated On : 27 Jun 2013, 10:59 am

ಕನ್ನಡಪ್ರಭ ವಾರ್ತೆ, ಆಳಂದ, ಜೂ.26
ಪಟ್ಟಣದ ಪುರಸಭೆ ವ್ಯಾಪ್ತಿಯ ಬಡವರಿಗಾಗಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ದೊರೆಯುವ 530 ಆಶ್ರಯ ಮನೆಗಳು ಶೀಘ್ರವೇ ಫಲಾನುಭವಿಗಳಿಗೆ ಹಂಚಿಕೆಗೆ ಆಶ್ರಯ ಸಮಿತಿ ಸಭೆ ಬುಧವಾರ ನಿರ್ಧರಿಸಿದೆ.
  ಈ ಕುರಿತು ಪುರಸಭೆ ಸಭಾಂಗಣದಲ್ಲಿ ಬುಧವಾರ ಕರೆದ ಆಶ್ರಯ ಸಮಿತಿ ಅಧ್ಯಕ್ಷರೂ ಆದ ಶಾಸಕ ಬಿ.ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಶ್ರಯ ಸಭೆಯಲ್ಲಿ ಮನೆಗಳ ವಿತರಣೆಗೆ ಹೊಸ ಅರ್ಜಿಗಳನ್ನು ಕರೆದು ಕಾನೂನುಬದ್ಧ ಹಾಗೂ ಅರ್ಹ ಫಲಾನುಭವಿಗಳ ಆಯ್ಕೆಗೆ ತೀರ್ಮಾನಿಸಲಾಯಿತು.
  ಅರ್ಜಿ ಕರೆದು ಅರ್ಹ ಫಲಾನುಭವಿಗಳ ಆಯ್ಕೆಗೆ ನಿಗಮದ ಅನುಮತಿಗೆ ಪ್ರಸ್ತಾವನೆ ಕಳುಹಿಸಿಕೊಡಲು ನಿರ್ಧರಿಸಲಾಯಿತು.
  2005-06ರಲ್ಲಿ ಪಟ್ಟಣದ ಹೊರವಲಯದ 15 ಎಕರೆ ಜಮೀನು ಖರೀದಿಗೆ ಪುರಸಭೆ ಆಡಳಿತ ಮಂಡಳಿ ಮುಂದಾದಾಗ ಅದರ ಅನುಮೋದನೆ ಪಡೆಯಲು 2010-11ರವರೆಗೆ ಕಾಲಾವಕಾಶ ಪಡೆದುಕೊಂಡಿತು. ಹೀಗಾಗಿ ಮನೆಗಳ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗಿತ್ತು ಎಂದು ಶಾಸಕ ಬಿ.ಆರ್. ಪಾಟೀಲ್ ತಿಳಿಸಿದರು.
ಆಶ್ರಯ ಮನೆಗಳ ನಿರ್ಮಾಣಕ್ಕೆ ಜಮೀನು ಸ್ವಾಧೀನ ಇಲ್ಲದ ಹೊತ್ತಿನಲ್ಲಿ ಕಾನೂನು ಬಾಹಿರವಾಗಿ ಅರ್ಜಿಗಳನ್ನು ಕರೆಯಲಾಗಿತ್ತು. ಹೊಸ ಅರ್ಜಿಗಳನ್ನು ಕರೆದು ಪಟ್ಟಿ ಸಿದ್ಧಪಡಿಸಿ ಅರ್ಹರಿಗೆ ಮನೆಗಳು ದೊರೆಯುವಂತಾಗಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
  ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಕೈಸರ್ ಹುಸೇನ್, ಧರ್ಮಲಿಂಗ ಜಗದೆ, ಚಂದ್ರಶೇಖರ ಹಳ್ಳಿಗೇರ, ವಿಜಯಕುಮಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement