ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೇಷನ್ ಕಾರ್ಡ್ ಸಮಸ್ಯೆ ಬಗೆಹರಿಸಿ

Rashmi Kasaragodu
Updated On : 28 Jun 2013, 10:19 am


ಗುಲ್ಬರ್ಗ/ಶಹಾಬಾದ್: ಭಂಕೂರ ಗ್ರಾಮದ ಜನರ ಸಮಸ್ಯೆ ಬಗೆಹರಿಸಲು ಹಿಂದೇಟು ಹಾಕಿದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪಿಡಿಒ ನಾರಾಯಣರಾವ ಹಾಗೂ ತಾಪಂ ಕಾರ್ಯನಿರ್ವಾಹಕ ಅಭಿಯಂತರ ಸುರೇಶ ಬಿರಾದಾರ ಅವರಿಗೆ ಎಚ್ಚರಿಕೆ ನೀಡಿದರು.
ಭಂಕೂರ ಗ್ರಾಮದ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಜನರ ಕುಂದುಕೊರತೆಗಳನ್ನು ಆಲಿಸಿದರು. ಗ್ರಾಮದ ಜನರಿಗೆ ರೇಷನ್ ಕಾರ್ಡ್ ಸಮಸ್ಯೆ ತಲೆದೋರಿದೆ. ಇದಕ್ಕೆ ಹೊರಗುತ್ತಿಗೆ ನೀಡಿರುವುದೇ ಮೂಲ ಕಾರಣ ಎಂದು ಮಾಜಿ ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಿಕಾಂತ ಕಂದಗೂಳ, ಮಹೇಶ ಪೂಜಾರಿ ಮಾಹಿತಿ ನೀಡಿದರು.
ಜನರ ಅಹವಾಲು ಸ್ವೀಕರಿಸಿದ ಶಾಸಕ ಪ್ರಿಯಾಂಕ್ ಖರ್ಗೆ, ರೇಷನ್ ಕಾರ್ಡ್ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸಿ, ಜನರಿಗೆ ನೀಡುವಂತೆ ಕಾರ್ಯ ಕೈಗೊಳ್ಳಿ. ಯಾರೂ ರೇಷನ್ ಕಾರ್ಡ್ ಸಮಸ್ಯೆಗೆಂದು ತಾಲೂಕಿಗೆ ಬರಬೇಕಾಗಿಲ್ಲ. ನಿಮ್ಮ ಗ್ರಾಮ ಪಂಚಾಯ್ತಿಯಲ್ಲಿಯೇ ನೀಡುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಜ್ಯೋತಿ ಬಿ. ಶಿರಗೊಂಡ, ಉಪಾಧ್ಯಕ್ಷ ಅಲಿಂ, ಜಿಪಂ ಸದಸ್ಯ ರಮೇಶ ಮರಗೋಳ, ಜಿಪಂ ಮಾಜಿ ಸದಸ್ಯ ಮಾಪಣ್ಣ ಗಂಜಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement