ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಿಕ್ಷಣ ಹಕ್ಕು ಉಲ್ಲಂಘನೆ; ಕಳವಳ

Rashmi Kasaragodu
Updated On : 28 Jun 2013, 10:21 am

ಕ.ಪ್ರ. ವಾರ್ತೆ  ಯಾದಗಿರಿ  ಜೂ.27
ಮೂಲಭೂತ ಹಕ್ಕಾದ ಶಿಕ್ಷಣ ಮಕ್ಕಳಿಗೆ ಅವಶ್ಯಕವಾಗಿದೆ. ಆದರೆ ಇಂದಿನ ದಿನಗಳಲ್ಲಿ ಮಕ್ಕಳಿಗೆ ಸರಿಯಾಗಿ ಶಿಕ್ಷಣ ದೊರೆಯುತ್ತಿಲ್ಲ. ಇದು ಅವರ ಹಕ್ಕಿನ ಉಲ್ಲಂಘನೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕಾದ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜರ್ ಹುಸೇನ್ ಹೇಳಿದರು.
  ನಗರದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ  ಗುರುವಾರ ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ ಎರಡು ದಿನಗಳು ಮಾನವ ಹಕ್ಕುಗಳ ಶಿಕ್ಷಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
 ಮಾನವ ಹಕ್ಕುಗಳು ಶಿಕ್ಷಣ ಸಂಸ್ಥೆಗೆ ತುಂಬಾ ಅವಶ್ಯವಾಗಿದ್ದು, ಈ ಕರ್ತವ್ಯವನ್ನು ನಾವು ಮರೆತ್ತಿದ್ದೇವೆ. ಪ್ರತಿಯೊಂದು ಹಂತದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪೋಷಕರು, ಶಿಕ್ಷಕರು, ಸಾರ್ವಜನಿಕರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಪತ್ರಿಯೊಬ್ಬರೂ ಜೀವನದಲ್ಲಿ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಾಗ ಸಮಾಜದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಪ್ರೀತಿಯಿಂದ ಶಿಕ್ಷಣ ನೀಡಿ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದ್ದು, ಮಹಿಳೆಯರಿಗೂ ಸಮಾನ ಅವಕಾಶ ಒದಗಿಸಬೇಕು. ಶಿಕ್ಷಕರು ಮಕ್ಕಳನ್ನು ಪ್ರೀತಿಯಿಂದ ಶಿಕ್ಷಣದ ಕಡೆಗೆ ಬರಮಾಡಿಕೊಳ್ಳಬೇಕು. ಪ್ರತಿಯೊಬ್ಬ ಶಿಕ್ಷಕರೂ ಮೊದಲು ಹಕ್ಕುಗಳನ್ನು ಅರಿತುಕೊಂಡು, ಮಕ್ಕಳಿಗೆ ಹಕ್ಕುಗಳ ಪರಿಚಯ ಮಾಡುವ ಮುಖಾಂತರ ಅಗತ್ಯ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
  ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ಫಾ. ಸಜ್ಜಿ ಜಾರ್ಜ್ ಮಾತನಾಡಿ, ಶಿಕ್ಷಕರು ಮೊದಲು ಹಕ್ಕುಗಳ ಬಗ್ಗೆ ಅರಿತಾಗ ಮಾತ್ರ ಮಕ್ಕಳಿಗೆ ಹಕ್ಕುಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಸಾಧ್ಯ ಎಂದರು. ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರ ನಿರ್ದೇಶಕ ಫಾ.ರೆಜಿ ಜೇಕಾಬ್, ಡಿಇಡಿ ಕಾಲೇಜು ಪ್ರಾಶುಪಾಲ ಫಾ. ಜೋಷಿ, ಫಾ. ಯೇಸುದಾಸ್, ಸಿಸ್ಟರ್ ಮರಿಯಾ ಇದ್ದರು. ಶರಣಮ್ಮ ಸಿ.ಅಮರಾಪುರ ಸ್ವಾಗತಿಸಿದರು. ಶರಬಯ್ಯ ಕಲಾಲ ನಿರೂಪಿಸಿದರು. ದೀಪಿಕಾ ಗೌಳಿ ವಂದಿಸಿದರು. ನಂತರ ತಾಲೂಕಿನ ಶಿಕ್ಷಕರಿಗೆ ಮಾನವ ಹಕ್ಕುಗಳ ಶಿಕ್ಷಣ ತರಬೇತಿ ಕಾರ್ಯಾಗಾರ ನಡೆಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement