ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ

Rashmi Kasaragodu
Updated On : 29 Jun 2013, 10:57 am

ಯಾದಗಿರಿ: ಯುವ ಜನಾಂಗ ಆರಂಭದಲ್ಲಿ ಸಂತೋಷ, ವಿನೋದಕ್ಕಾಗಿ ಮಾದಕ ದ್ರವ್ಯವನ್ನು ಸೇವಿಸಲಾರಂಭಿಸುತ್ತಾರೆ. ಅದು ಕೊನೆಗೆ ಚಟವಾಗಿ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ. ಆದ್ದರಿಂದ ಯುವಜನತೆ ಈ ಬಗ್ಗೆ ಜಾಗೃತರಾಗಿರಬೇಕೆಂದು ಗ್ರಾಮೀಣ ಠಾಣೆಯ ಪಿಎಸ್ಐ ಗುರುಶಾಂತ ದಾಶ್ಯಾಳ ಹೇಳಿದರು. ತಾಲೂಕಿನ ಹತ್ತಿಕುಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸುಂದರ ಸಮಾಜ ಕಟ್ಟಲು ವಿದ್ಯಾರ್ಥಿ ಹಾಗೂ ಧಾರ್ಮಿಕ ಸಂಸ್ಥೆಗಳ ಕಾರ್ಯ ಗುರುತರವಾದುದು. ಇವರೆಡೂ ಕ್ಷೇತ್ರದ ಮೇಲೆ ಸಮಾಜದ ವಿಶ್ವಾಸವಿದ್ದು, ವಿದ್ಯಾರ್ಥಿ ಮತ್ತು ಧಾರ್ಮಿಕ ಕೇಂದ್ರಗಳು ವ್ಯಸನ ಮುಕ್ತ ಸಮಾಜ ನಿರ್ಮಿಸಲು ಪಣ ತೊಡಬೇಕು ಎಂದರು. ಎ.ಎಂ. ಸೈದಾಪುರ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿ.ಪಿ. ಹೊಸಟ್ಟಿ ವಹಿಸಿದ್ದರು. ಉಪನ್ಯಾಸಕ ಪಾಂಡು ರಾಠೋಡ್, ರಾಜೇಂದ್ರಕುಮಾರ್, ಸಾಬಣ್ಣ ಜುಬೇರ್ ಇದ್ದರು.
ರೈತ ಸಂಘದ ಸಂಚಾಲಕರಾಗಿ ಸಾಗರ ಆಯ್ಕೆ
ಶಹಾಪುರ: ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯು ಇತ್ತೀಚೆಗೆ ಸಭೆ ಸೇರಿ ಜಿಲ್ಲೆಯ ರೈತ ಸಂಘದ ಸಮಿತಿಯನ್ನು ಪ್ರತ್ಯೇಕ ಮಾಡಿದ್ದು, ಸಮಿತಿಯ ಜಿಲ್ಲಾ ಸಂಚಾಲಕರನ್ನಾಗಿ ಶಹಾಪುರದ ಎಸ್.ಎಂ. ಸಾಗರ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ ಇತರರು ಇದ್ದರು.
ಜೈಕರವೇ
ಪದಾಧಿಕಾರಿಗಳು
ಸುರಪುರ: ಜೈ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಶಿವಮೋನಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ರವಿ ಕಡದರಾಳ ಸಮ್ಮುಖದಲ್ಲಿ ಜೈಕರವೇ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ವೆಂಕಟೇಶ ಚಟ್ನಳ್ಳಿ- ತಾಲೂಕು ಉಪಾಧ್ಯಕ್ಷ, ಮಾನಪ್ಪ ಕಟ್ಟಿಮನಿ ವಾಗಣಗೇರಾ- ಕಾರ್ಯಾಧ್ಯಕ್ಷ, ವೆಂಕಟೇಶ ಕವಡಿಮಟ್ಟಿ- ಸಹ ಕಾರ್ಯಾಧ್ಯಕ್ಷ, ಇಮಾಮ್ ಸಾಬ್ ವಾಗಣಗೇರಾ- ಸಂಘಟನಾ ಕಾರ್ಯದರ್ಶಿ, ಪರಶುರಾಮ ಭೋವಿ- ಸಹ ಕಾರ್ಯದರ್ಶಿ, ಬೈರಣ್ಣ ಅಂಬಿಗೇರ- ಖಜಾಂಚಿ, ದೇವಿಂದ್ರಪ್ಪಗೌಡ ಮಾಲಿ ಪಾಟೀಲ್- ದೇವರಗೋನಾಳ ಹೋಬಳಿ ಘಟಕದ ಅಧ್ಯಕ್ಷ, ಭೀಮಶಪ್ಪ ಹಿರೇಮನಿ ಮಲ್ಲಿಭಾವಿ- ಸುರಪುರ ನಗರ ಘಟಕ ಅಧ್ಯಕ್ಷ, ಯಲ್ಲಪ್ಪ ನಗನೂರು- ನಗರ ಘಟಕದ ಪ್ರಧಾನ ಕಾರ್ಯದರ್ಶಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement