ಮೇಲ್ಸೇತುವೆ ಕುಸಿತ, ಸಂಚಾರಕ್ಕೆ ಅಡ್ಡಿ
ಆಳಂದ: ತಾಲೂಕಿನ ದರ್ಗಾಶಿರೂರ ಗ್ರಾಮದ ಹತ್ತಿರ ಮೇಲ್ಸೇತುವೆ ಕುಸಿದು ಬಿದ್ದಿದ್ದು, ಇದರ ಪರಿಣಾಮವಾಗಿ ರಸ್ತೆ ಸಂಪರ್ಕ ಕಡಿತ ಕೊಂಡಿದೆ.
ಈ ಮಾರ್ಗದಿಂದ ಸಂಚರಿಸುವ ಎಲ್ಲ ವಾಹನಗಳು ಕೆರೂರ ಗ್ರಾಮದಿಂದ ನಿಂಗದಳ್ಳಿ ಮುಖಾಂತರ ಸಂಚರಿಸುವಂತಾಗಿದೆ. ಸೇತುವೆ ಬಹಳ ಹಳೆಯದಾಗಿದ್ದರಿಂದ ಕೇವಲ ಬೆಡ್ಡಹಾಕಿ ನಿರ್ಮಾಣ ಮಾಡಲಾಗಿದೆ ಎಂದು ಈ ಭಾಗದ ಸಾರ್ವಜನಿಕರು ಆರೋಪಿಸಿದ್ದಾರೆ. ಕೆಳಗಡೆ ಯಾವುದೇ ಸಿಮೆಂಟ್ ಕಂಬಗಳು ಹಾಕಿರುವುದಿಲ್ಲ ಇದರಿಂದ ಕಳೆದ ಎರಡು ದಿನದಿಂದ ಸುರಿದ ಅಲ್ಪ ಮಳೆಗೆ ಈ ಸೇತುವೆ ಕುಸುದಿರಬಹುದು ಎಂದು ಹೇಳಲಾಗುತ್ತಿದೆ. ಸೇತುವೆ ಕುಸಿಯುತ್ತಿರುವುದನ್ನು ಕಂಡು ಸ್ಥಳೀಯರು ಕೂಡಲೇ ಎಚ್ಚೆತು ಮುಂಜಾಗತವಾಗಿ ಸಂಚಾರ ಸ್ಥಗಿತಗೊಳಿಸಿದ್ದಾರೆ. ಇದರಿಂದ ಮುಂದಾಗುವ ಅನಾಹುತ ತಪ್ಪಿದಂತಾಗಿದೆ. ಕೂಡಲೇ ಸ್ಪಂದಿಸಿದ ಲೋಕೊಪಯೋಗಿ ಇಲಾಖೆ ಸೇತುವೆ ನಿರ್ಮಾಣ ಕಾರ್ಯ ಚುರುಕುಗೊಳಿಸಿದ್ದಾರೆ. ಆದರೂ ಸಂಚಾರ ಆರಂಭವಾಗದೆ ಕಾಯಬೇಕಾಗಿದೆ.