ರೋಗ ನಿರೋಧಕ ಶಕ್ತಿ; ಹೋಮಿಯೋಪಥಿ ಪೂರಕ
ಶಹಾಪುರ: ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುವ ಮೂಲಕ ರೋಗ ಗುಣ ಮಾಡುವ ಚಿಕಿತ್ಸಾ ಪದ್ಧತಿಯಲ್ಲಿ ಹೋಮಿಯೋಪಥಿ ತನ್ನದೇ ಆದ ಮಹತ್ವ ಪಡೆದಿದೆ ಎಂದು ಬೆಂಗಳೂರಿನ ಹೋಮಿಯೋಪಥಿ ಇಲಾಖೆ ನಿರ್ದೇಶಕ ಡಾ. ಮಹೇಶ ಎಂ. ತಿಳಿಸಿದರು.
ಪಟ್ಟಣದಲ್ಲಿ ಡಾ. ಕೃಷ್ಣಮೂರ್ತಿ ಹಾಗೂ ಡಾ. ದೀಪ್ತಿ ಅವರು ಪ್ರಾರಂಭಿಸಿದ ಹೋಮಿಯೋಪಥಿ ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೋಮಿಯೋಪಥಿಯಲ್ಲಿ ರೋಗ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿ ಪ್ರತ್ಯೇಕ ವ್ಯಕ್ತಿಯ ಶರೀರ ಪ್ರಕೃತಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಶಹಾಪುರ ತಾಲೂಕಿನ ಜನತೆ ಆರೋಗ್ಯ ಭಾಗ್ಯದ ದೃಷ್ಟಿಯಿಂದ ಇದರ ಉಪಯೋಗ ಪಡೆಯಬೇಕು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವೈದ್ಯ ಡಾ. ಚಂದ್ರಶೇಖರ ಸುಬೇದಾರ ನೆರವೇರಿಸಿದರು. ವೇದಮೂರ್ತಿ ಬಸವಯ್ಯ ಶರಣರು ಸಾನ್ನಿಧ್ಯ ವಹಿಸಿದ್ದರು. ಡಾ. ಬಸವರಾಜ ಇಜೇರಿ, ಡಾ. ಬಸವರಾಜ, ಶಿವರಾಯ ಡಾ. ಎಸ್.ಎಸ್. ಕಟ್ಟಿಮನಿ, ಡಾ. ಮೇಘಾ ಶಿವರಾಯ, ಡಾ. ಪ್ರಭುರಾಜ ಮಡ್ಡಿ, ಡಾ. ಫಿರೋಜ ಹುಂಡೆಕರ್, ಡಾ. ವೆಂಕಟೇಶ ಟೊಣಪೆ, ಮಧು ಪಾಟೀಲ, ರಾಜುಗೌಡ ಉಕ್ಕಿನಾಳ, ಶ್ರೀನಿವಾಸ ಧರ್ಮಲಿಂಗಮ್, ಶಂಕರಸಿಂಗೆ, ಮೋನಯ್ಯ ಹೊಸ್ಮನಿ, ಚಂದ್ರಶೇಖರ ದೊಡ್ಮನಿ, ಅನಂತರಾವ ದೇಶಪಾಂಡೆ, ವಿಠಲಾಚಾರ್ಯ ಇತರರು ಇದ್ದರು.