ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶೇ.57ರಷ್ಟು ಬಿತ್ತನೆ: ಬಳವಾಟ್ ಸ್ಪಷ್ಟನೆ

Rashmi Kasaragodu
Updated On : 29 Jun 2013, 10:53 am

ಚಿಂಚೋಳಿ: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಬಿತ್ತನೆ ಗುರಿ 70,745 ಹೆಕ್ಟೇರ್ ಇದ್ದು, ತಾಲೂಕಿನಲ್ಲಿ ಅನೇಕ ಗ್ರಾಮಗಳಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದು, 40, 378 ಹೆಕ್ಟೇರ್ ಜಮೀನುದಲ್ಲಿ ಬಿತ್ತನೆಯಾಗಿದ್ದು, ಶೇ.57ರಷ್ಟು ಬಿತ್ತನೆಯಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ್ ತಿಳಿಸಿದ್ದಾರೆ.
ತಾಲೂಕಿನ ರೈತರ ಆರ್ಥಿಕ ಬೆಳೆಗಳಾದ ತೊಗರಿ- 27,713 ಹೆಕ್ಟೇರ್, ಉದ್ದು- 5314 ಹೆಕ್ಟೇರ್, ಹೆಸರು-3415 ಹೆಕ್ಟೇರ್, ಎಳ್ಳು- 36 ಹೆಕ್ಟೇರ್, ಜೋಳ- 612 ಹೆಕ್ಟೇರ್, ಮೆಕ್ಕೆಜೋಳ-51 ಹೆಕ್ಟೇರ್, ಸಜ್ಜೆ-315 ಹೆಕ್ಟೇರ್, ಸೋಯಾಬಿನ್-2908 ಹೆಕ್ಟೇರ್ ಇತರೆ 14 ಹೆಕ್ಟೇರ್ ಬಿತ್ತನೆಯಾಗಿದೆ.
ಐನಾಪುರ, ಚಿಮ್ಮನಚೋಡ, ಕುಂಚಾವರಂ, ಕೋಡ್ಲಿ, ಸುಲೇಪೇಟ್, ನಿಡಗುಂದಾ, ಹಸರಗುಂಡಗಿ, ಸಾಲೇಬೀರನಳ್ಳಿ, ಮಿರಿಯಾಣ, ಶಾದೀಪುರ, ವೆಂಕಟಾಪುರ, ಮೋಘಾ, ಚಂದನಕೇರಾ, ಚೇಂಗಟಾ, ರಟಕಲ್, ಗಡಿಕೇಶ್ವರ, ಹೊಡೇಬೀರನಳ್ಳಿ, ಕನಕಪುರ, ಚಿಮ್ಮಾಇದಲಾಯಿ, ಐನೋಳ್ಳಿ, ದೇಗಲಮಡಿ, ಕರಚಖೇಡ, ಶಿರೋಳ್ಳಿ, ಕೆರೊಳ್ಳಿ ಮುಂತಾದ ಗ್ರಾಮಗಳಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಜೂನ್ ತಿಂಗಳ ವಾಡಿಕೆ ಮಳೆ 147.9 ಮಿಮೀ ಗುರಿ ಇದೆ. ಈಗಾಗಲೇ ಜೂನ್ ತಿಂಗಳಲ್ಲಿ 160.1 ಮಿಮೀ ಅಧಿಕ ಮಳೆಯಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಡ ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement