ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೇಡಂ; ಯುವತಿ ಮೇಲೆ ಅತ್ಯಾಚಾರ

Rashmi Kasaragodu
Updated On : 29 Jun 2013, 10:53 am

ಗುಲ್ಬರ್ಗ: ವ್ಯಕ್ತಿಯೊಬ್ಬ ಯುವತಿ ಮೇಲೆ ಅತ್ಯಾಚಾರ ಮಾಡಿದ ಘಟನೆ ಸೇಡಂ ನಗರದಲ್ಲಿ ನಡೆದಿದೆ. ಸೇಡಂನ ಇಂದಿರಾ ನಗರದ ನಿವಾಸಿಯಾಗಿರುವ ಸ್ಯಾಮುವೆಲ್ ಎಂಬಾತ ಪಕ್ಕದ ಮನೆಯ ಯುವತಿಯೊಬ್ಬಳು ಮನೆಗೆ ಬಂದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದರ ಪರಿಣಾಮ ಆಕೆ 6 ತಿಂಗಳ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಯಾಮುವೆಲ್ ಅವರ ಮನೆಯಲ್ಲಿ ಭರ್ಜರಿ ತಯಾರಿ ನಡೆದಿತ್ತು. ಕ್ರಿಸ್ಮಸ್ ಹಬ್ಬದ ಎರಡು ದಿನಗಳ ಮುಂಚೆ ಪಕ್ಕದ ಮನೆಯ ಯುವತಿ ಹಬ್ಬದ ತಯಾರಿಯನ್ನು ವೀಕ್ಷಿಸಲು ಸ್ಯಾಮುವೆಲ್ ಅವರ ಮನೆಗೆ ಹೋಗಿದ್ದಾಗ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆತ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ. ಯುವತಿಯ ತಾಯಿ ವಿಷಯದ ಬಗ್ಗೆ ವಿಚಾರಣೆ ಮಾಡಿದಾಗ ಆಕೆ ಸ್ಯಾಮುವೆಲ್ ಹೆಸರು ಬಹಿರಂಗ ಪಡೆಸಿದ್ದಾಳೆ. ಯುವತಿಯ ತಾಯಿ ಸೇಡಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement