ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗುಲ್ಬರ್ಗಕ್ಕೆ ನಾಳೆ ಹೈದ್ರಾಬಾದ್ ಕರ್ನಾಟಕ ಉಪ ಸಮಿತಿ ಸದಸ್ಯರ ಭೇಟಿ

Rashmi Kasaragodu
Updated On : 30 Jun 2013, 12:19 pm

ಯಾದಗಿರಿ: ಸಂವಿಧಾನದ 371 (ಜೆ) ಕಲಂ ಅಡಿ ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆ, ಈ ಪ್ರದೇಶದ ಜನರಿಗೆ ಸಾರ್ವಜನಿಕ ಹುದ್ದೆಗಳಲ್ಲಿ ಮೀಸಲಾತಿ, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ, ಮೀಸಲಾತಿ ಸೌಲಭ್ಯಗಳನ್ನು ಒದಗಿಸಲು ನಿಯಮಗಳನ್ನು ಪರಿಶೀಲಿಸಿ ವರದಿಯನ್ನು ನೀಡಲು ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿದೆ.
  ಈ ಸಮಿತಿಯು ಜು.1ರಂದು ಗುಲ್ಬರ್ಗಕ್ಕೆ ಆಗಮಿಸಲಿದೆ.  ಈ ಸಮಿತಿ ಜು.1ರಂದು ಮಧ್ಯಾಹ್ನ 12 ಗಂಟೆಯಿಂದ ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೈ.ಕ ಪ್ರದೇಶದ ಜಿಲ್ಲೆಗಳ ಸಂಸತ್ ಸದಸ್ಯರ ಹಾಗೂ ಶಾಸಕರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಿದೆ.
ಅಲ್ಲದೇ ಹೈಕ ಹೋರಾಟ ಸಮಿತಿ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ, ಸಲಹೆಗಳನ್ನು ಪಡೆಯಲಿದೆ.
ಯಾದಗಿರಿ ಜಿಲ್ಲೆಯ ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಹೈ.ಕ. ಪ್ರದೇಶದಲ್ಲಿ ಒದಗಿಸಬಹುದಾದ ವಿವಿಧ ಸೌಲಭ್ಯಗಳ ಕುರಿತ ಅಭಿಪ್ರಾಯ ಸಂಗ್ರಹಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement