ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವರದಕ್ಷಿಣೆ ಕಿರುಕುಳ

Rashmi Kasaragodu
Updated On : 30 Jun 2013, 12:18 pm

ಗುಲ್ಬರ್ಗ: ವರದಕ್ಷಿಣೆಗಾಗಿ ಪತ್ನಿಗೆ ಪತಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಾರ್ವತಿ ಗಂಡ ಬಸವರಾಜ ಜಮಾದಾರ ಎಂಬ ಮಹಿಳೆ ಕಿರುಕುಳಕ್ಕೆ ಒಳಗಾದವಳು. 12 ವರ್ಷಗಳ ಹಿಂದೆ ಗುಲ್ಬರ್ಗದ ಸಿದ್ದಾರೂಡ ಕಾಲೋನಿಯ ಬಸವರಾಜ ಜತೆ ಮಾಡಿಗಿ ಗ್ರಾಮದ ಪಾರ್ವತಿಯೊಂದಿಗೆ ಮದುವೆಯಾಗಿತ್ತು. ಮದುವೆಯಾದ 4 ವರ್ಷಗಳ ನಂತರ ಸರಿಯಾಗಿ ಮನೆ ಕೆಲಸ ಬರುವುದಿಲ್ಲ. ಹೆಚ್ಚಿನ ವರದಕ್ಷಿಣೆ ತರುವಂತೆ ಪತಿ ಬಸವರಾಜ ಆಕೆಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿರುವುದರಿಂದ ಬೇಸತ್ತು ಪತ್ನಿ ತವರೂರಾದ ಮಾಡಗಿ ಗ್ರಾಮಕ್ಕೆ ಮಕ್ಕಳೊಂದಿಗೆ ಬಂದು ನೆಲೆಸಿದ್ದಳು.
ನಂತರ ಚೆನ್ನಾಗಿ ನೋಡಿಕೊಳ್ಳುವುದಾಗಿ ವಾಗ್ವಾದ ಮಾಡಿ, ಪಾರ್ವತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಶುಕ್ರವಾರ ಬೆಳಗ್ಗೆ ಪತ್ನಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬಸವರಾಜ ಮನಬಂದಂತೆ ಹೊಡೆದಿದ್ದಾನೆ. ಈ ಕುರಿತು ಪಾರ್ವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement