ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೈಕ ಹೋರಾಟ ಸಮಿತಿ ಸಭೆ

Rashmi Kasaragodu
Updated On : 30 Jun 2013, 12:19 pm

ಯಾದಗಿರಿ; ಸಿಇಟಿ ಪ್ರಕ್ರಿಯೆ ವಿರೋಧಿಸಿ ಹೈಕ ಹೋರಾಟ ಸಮಿತಿ ಸೋಮವಾರ ಗುಲ್ಬರ್ಗದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ನೂರಾರು ಜನತೆ ಭಾಗವಹಿಸಲಿದ್ದಾರೆ ಎಂದು ಯಾದಗಿರಿ ಜಿಲ್ಲಾ ಹೈಕ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್ ತಿಳಿಸಿದರು. ಶನಿವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹೈಕ ಪದಾಧಿಕಾರಿಗಳು ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಚಿವ ಎಚ್.ಕೆ. ಪಾಟೀಲ್ ಸೋಮವಾರ ಗುಲ್ಬರ್ಗದಲ್ಲಿ ಹೈಕ ಭಾಗದ ಎಲ್ಲ ಜಿಲ್ಲೆಗಳ ಹೋರಾಟ ಸಮಿತಿಯ ಪದಾಧಿಕಾರಿಗಳ ಜತೆ 371 (ಜೆ)ಕಲಂ ಅನುಷ್ಠಾನ ಕುರಿತು ಚರ್ಚಿಸಲಿದ್ದಾರೆ. ಆದರೆ, ಸಿಇಟಿ ಪ್ರಕ್ರಿಯೆ ನಿಲ್ಲಿಸಬೇಕೆಂದು ಆಗ್ರಹಿಸಿ ಹೈಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲರ ನೇತೃತ್ವದಲ್ಲಿ ಸಚಿವರ ಸಭೆಯನ್ನು ಬಹಿಷ್ಕರಿಸಲು ಒಮ್ಮತದಿಂದ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಲಾಗಿದೆ ಎಂದರು.  ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಪ್ರಮುಖರಾದ ಅಯ್ಯಣ್ಣ ಹುಂಡೇಕಾರ, ಸಿ.ಎಂ ಪಟ್ಟೇದಾರ, ಅನೀಲ ಗುರೂಜಿ, ಶ್ರೀನಿವಾಸ ಕರ್ಲಿ, ಬಸವರಾಜ ಶಾಸ್ತ್ರಿ, ವಿ.ಸಿ.ರೆಡ್ಡಿ, ಶ್ರೀಮಂತ ಕಡಗಂಚಿ, ಮಲ್ಲಣ್ಣ ಕಡೇಚೂರ, ಅಶೋಕ ಕೆಂಭಾವಿ, ಸಂಗಣ್ಣ ಹೊಸಪೇಟ, ನೂರಂದಪ್ಪ ಇತರರಿದ್ದರು.
ಮರಳು ಸಾಗಣೆ ತಡೆಗೆ ಒತ್ತಾಯ
ಯಾದಗಿರಿ: ತಾಲೂಕಿನ ಬಾಚವಾರ ತಾಂಡದಲ್ಲಿ ಅಕ್ರಮ ಮರಳು ಸಾಗಣೆ ನಡೆಯುತ್ತಿದ್ದು, ಕೂಡಲೇ ಮರಳು ಸಾಗಣೆ ತಡೆಯಬೇಕೆಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.ತಾಂಡಾದಲ್ಲಿ ಅಕ್ರಮವಾಗಿ ಮರಳು ಸಾಗಣೆಯಿಂದ ವಿದ್ಯುತ್ ಕಂಬುಗಳು ಬೀಳುವ ಹಂತದಲ್ಲಿದೆ. ಮಳೆಗಾಲ ಇರುವುದರಿಂದ ಹೆಚ್ಚು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ. ಮರಳು ಸಾಗಾಣಿಕೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶಾಮೀಲಾಗಿ ದಿನಕ್ಕೆ ಸುಮಾರು 50-60 ಲಾರಿಗಳಷ್ಟು ಮರಳು ಸಾಗಿಸಲಾಗುತ್ತಿದೆ ಎಂದು  ಆರೋಪಿಸಿದ್ದಾರೆ. ಕೂಡಲೇ ಅಂಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಸಂಘಟನೆ ಜಿಲ್ಲಾಧ್ಯಕ್ಷ ತೇಜರಾಜ ರಾಠೋಡ, ರಾಮು ನಾಯಕ, ರಾಮನಾಥ, ಮಲ್ಲಗೌಡ ಪಗಲಾಪುರ ಇತರರು ಇದ್ದಾರೆ.
ನಾಳೆ ಚೇತನ
ಪ್ರಶಸ್ತಿ ಪ್ರದಾನ
ಸುರಪುರ:ರಂಗಂಪೇಟೆಯ ಸುದೀಪ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಾಯಿಬಣ್ಣ ಪುರ್ಲೆ ಬೆಂಗಳೂರು ಪತ್ರಕರ್ತರ ವೇದಿಕೆ ಮೀಡಿಯಾ, ನ್ಯೂಸ್ ಸೆಂಟರ್ ನೀಡುವ 2013ನೇ ಸಾಲಿನ ಕರ್ನಾಟಕ ಚೇತನ ಪ್ರಶ್ತಿಗೆ ಆಯ್ಕೆಯಾಗಿದ್ದಾರೆ. ಜು.1ರಂದು ಪತ್ರಿಕಾ ದಿನಾಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ಕಾರ್ಯಕ್ರಮ  ಪ್ರಶಸ್ತಿ ಪ್ರದಾನ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement