3 ಬಾಲ ಕಾರ್ಮಿಕರ ರಕ್ಷಣೆ ವಸತಿ ಶಾಲೆಗೆ ದಾಖಲು
ಗುಲ್ಬರ್ಗ; ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಬಾಲ ಕಾರ್ಮಿಕ ನಿರ್ಮೂಲನಾ ಸಂಘ ಹಾಗೂ ವಿಶ್ವ ಸೇವಾ ಮಿಷನ್ ಸಂಸ್ಥೆ ವತಿಯಿಂದ ಶುಕ್ರವಾರ ವಿವಿಧೆಡೆ ದಾಳಿ ನಡೆಸಿ ಮೂವರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಅವರನ್ನು ರಾಷ್ಟ್ರೀಯ ಬಾಲ ಕಾರ್ಮಿಕ ವಿಶೇಷ ವಸತಿ ಶಾಲೆಗೆ ದಾಖಲಿಸಲಾಗಿದೆ.
ನಗರದ ಚೆಕ್‌ಪೋಸ್ಟ್ ಹತ್ತಿರವಿರುವ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ತಯ್ಯಾಬ್, ಫಾರೂಕ್ ಹಾಗೂ ಸುಲ್ತಾನಪುರ ಕ್ರಾಸ್ ಸಮೀಪದ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ವಿಷ್ಣು ಎಂಬ ಬಾಲಕರನ್ನು ಬಾಲ ಕಾರ್ಮಿಕರು ಎಂದು ಪರಿಗಣಿಸಿ ಬಾಲ ಕಾರ್ಮಿಕ ಶಾಲೆಗೆ ಕರೆತರಲಾಯಿತು.ಹಿರಿಯ ಕಾರ್ಮಿಕ ಅಧಿಕಾರಿ ಎನ್.ಬಿ. ಜೋಶಿ, ಶ್ರೀಹರಿ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ರಾಷ್ಟ್ರೀಯ ಬಾಲ ಕಾರ್ಮಿಕ ನಿರ್ಮೂಲನಾ ಸಂಘದ ಕ್ಷೇತ್ರಾಧಿಕಾರಿ ಚಂದ್ರಕಾಂತ ಬಿರಾದಾರ, ವಿಶ್ವ ಸೇವಾ ಮಿಷನ್ ಸಂಸ್ಥೆ ಅಂಬರೀಷ ತಾಡಪಳ್ಳಿ, ಜೈ ಭೀಮ ಬಡದಾಳ ಹಾಗೂ ಇತರರು ದಾಳಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.