4 ರಂದು ಜಾತ್ರಾ ಮಹೋತ್ಸವ, ರಥೋತ್ಸವ
ಗುಲ್ಬರ್ಗ: ಜೇವರ್ಗಿ ತಾಲೂಕಿನ ಹೊಳೆ ಹಂಚಿನಾಳ ಗ್ರಾಮದ ಶರಣಮುತ್ಯಾ ಮಹಾರಾಜರ 13ನೇ ಪುಣ್ಯಸ್ಮರಣೆ ಹಾಗೂ 18ನೇ ಜಾತ್ರಾ ಮಹೋತ್ಸವ ಅಂಗವಾಗಿ ಮಾ.4 ರಂದು ಸಂಜೆ 6ಕ್ಕೆ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾ.3 ರಂದು ಬೆಳಗ್ಗೆ 6. 30ಕ್ಕೆ ಸಂಸ್ಥಾನ ಮಠದಿಂದ ಶ್ರೀಗಳ ಪಲ್ಲಕಿಯು ಗಾಣಗಾಪುರದ ಮರಗಮ್ಮ ದೇವಿಯ ಮಂದಿರಕ್ಕೆ ತಲುಪುವುದು. ಮಾ.4 ರಂದು ಬೆಳಗ್ಗೆ 6ಕ್ಕೆ ದತ್ತ ಮಂದಿರದಲ್ಲಿ ಪೂಜೆ ಮುಗಿಸಿ, ಶ್ರೀಗಳ ಪಲ್ಲಕಿಯು ಕುಂಭ, ಕಳಸ ಹಾಗೂ ಮಂಗಳ ವಾದ್ಯಗಳೊಂದಿಗೆ ಹೊಳೆ ಹಂಚನಾಳದ ಶ್ರೀಗಳ ಮಠಕ್ಕೆ ಮರಳಿದ ನಂತರ ಮಹಾಪ್ರಸಾದ ಜರುಗುವುದು.