ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ಜ್ಯೋತಿಬಾಫುಲೆ ಜಯಂತ್ಯುತ್ಸವ

Rashmi Kasaragodu
Updated On : 2 Mar 2013, 11:33 am

ಗುಲ್ಬರ್ಗ: ಸೇಡಂ ತಾಲೂಕಿನ ಸರ್ಕಾರಿ ನೌಕರರ ಭವನದಲ್ಲಿ ಮಾ.2 ರಂದು ಬೆಳಗ್ಗೆ 11ಕ್ಕೆ ಜ್ಯೋತಿಬಾಫುಲೆರವರ 186ನೇ ಜಯಂತ್ಸುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕೋಡ್ಲಿ ಮಠದ ನಾಲ್ಕನೇ ಪೀಠಾಧಿಪತಿ ನಂಜುಂಡಸ್ವಾಮಿ ಸಾನ್ನಿಧ್ಯವಹಿಸುವರು. ವೈಜನಾಥ ಸೂರ್ಯವಂಶಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಸ್‌ಸಿ, ಎಸ್‌ಟಿ ನೌಕರರ ಸಂಘದ ಗೌರವಾಧ್ಯಕ್ಷ ನಾಗೇಂದ್ರ ನಾಟೀಕಲ್ ಜ್ಯೋತಿಬಾಫುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದು. ಎಸ್‌ಸಿ, ಎಸ್‌ಟಿ ನೌಕರರ ಸಂಘದ ಕಾರ್ಯಾಧ್ಯಕ್ಷ ಪೀರಪ್ಪ ಬೆಲ್ಲದ ಅಧ್ಯಕ್ಷತೆ ವಹಿಸುವರು. ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಜೈಭೀಮ ಪ್ರಾಸ್ತಾವಿಕ ಮಾತನಾಡುವರು.ಸೇಡಂ ತಾಲೂಕಿನ ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷಕುಮಾರ ಬನ್ನೆಟ್ಟಿ, ಉಪ ನೋಂದಣಾಧಿಕಾರಿ ಭಾಸ್ಕರ್ ಚೌರ, ಉದ್ಯಮಿ ಹಣಮಂತ ಬೋದನಕರ್, ಪೀರಪ್ಪ ಕಟ್ಟಿಮನಿ, ಸಿದ್ರಾಮಪ್ಪ ಕುಕ್ಕುಂದಾ, ಸುಭಾಷ ಬೊಮ್ಮನಳ್ಳಿ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement