ಕಾಂಗ್ರೆಸ್ ತೊರೆದು ರಾಜುಗೌಡ ಬಣಕ್ಕೆ ಸೇರ್ಪಡೆ
ಸುರಪುರ: ವಾರ್ಡ್ 6ರ ದೋಬೀ ಮೊಹಲ್ಲಾ ಮತ್ತು ವಾರ್ಡ್ ನಂ.7 ಝಂಡದಕೇರಾದ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪಕ್ಷ ತೊರೆದು ಮಾಜಿ ಸಚಿವ ರಾಜುಗೌಡರ ಬಣಕ್ಕೆ ಸೇರ್ಪಡೆಯಾದರು.
ಟಿಪ್ಪು ಸುಲ್ತಾನ್ ಸೇವಾ ಸಂಘದ ಅಧ್ಯಕ್ಷ ಖಾಜಾ ಖಲೀಲ ಅಹ್ಮದ್ ಅರಕೇರಿ ಹಾಗೂ ಸಂಘದ ಸದಸ್ಯರಾದ ಮಹ್ಮದ್ ಆರೀಫ್, ಮಹ್ಮದ್ ಮುಸ್ತಾಫ್, ಮಹ್ಮದ್ ಖಾಜಾಬಾಯಿ, ರಾಜಮಹ್ಮದ್, ಮಹ್ಮದ್ ಇರ್ಫಾನ್, ಮಹ್ಮದ ಗೌಸು, ಮಹ್ಮದ ಸೋಪಿ, ಮಹ್ಮದ ವಾಜೀದ್, ಮಹ್ಮದ ಬಾಬಾ, ಮಹ್ಮದ ತೋಸಿಫ್ ಅರಕೇರಿ, ಶೇಖ ಮಹಿಬೂಬ್, ಮಹ್ಮದ ಅಬೀಲ್, ಮಹ್ಮದ ಹುಸೇನ್, ಮಹ್ಮದ ಸರಮುದ್ದೀನ್, ಇಮ್ರಾನ್, ಮಹ್ಮದ ರಿಜ್ವಾನ್, ಮಹ್ಮದ ಸರಮುದ್ದೀನ್, ಜೆಟ್ಟೆಪ್ಪ, ಶೇಖರ, ಮಹಾದೇವ. ಬಸವರಾಜ, ಹಾಬೀದ್ ಹುಸೇನ್, ರಫೀಕ್ ಹುಸೇನ್ ಇನ್ನಿತರರು ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಮಹ್ಮದ ಸಲೀಂ ವರ್ತಿ, ನಿಂಗಣ್ಣ ಬಾದ್ಯಾಪುರ, ಸಿದ್ರಾಮ ಪಾಟೀಲ್ ಇದ್ದರು.