ವಚನಗಳು ದೈನಂದಿನ ಬದುಕಿಗೆ ಪೂರಕ: ಶಾಂತವೀರ ಶ್ರೀ
ಚಿತ್ತಾಪುರ: ಶರಣರ ವಚನಗಳು ದೈನಂದಿನ ಬದುಕಿಗೆ ಪೂರಕ ಎಂದು ಗುರುಮಿಠಕಲ್ ಖಾಸಮಠದ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ ನುಡಿದರು.
ತಾಲೂಕಿನ ಭಾಗೋಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಮಹೇಶ್ವರ ಸೇವಾ ಸಮಿತಿ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ಸಮಾಜದಲ್ಲಿ ಮೌಲ್ಯಗಳು ಕುಸಿದಿವೆ. ಮುಗ್ದ ಮನಸ್ಸು ಶೋಷಣೆ ಒಳಗಾಗುತ್ತಿವೆ. ಇವುಗಳನ್ನು ನಿವಾರಿಸಲು ಶರಣರು ವಚನಗಳು ಬರೆದು ಮೂಢನಂಬಿಕೆ, ಶೋಷಣೆ ವಿರುದ್ಧ ಹೊರಾಟ ಮಾಡಿದ್ದಾರೆ. ಅವರ ವಚನಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ತಾಪಂ ಅಧ್ಯಕ್ಷ ಶರಣಗೌಡ ಬಾಗೋಡಿ ಉದ್ಘಾಟಿಸಿ ಮಾತನಾಡಿ, ಶರಣರ ವಚನಗಳಲ್ಲಿ ಮಾನವೀಯ ಮೌಲ್ಯಗಳು ಅಡಗಿವೆ. ಅವು ನಮ್ಮ ಬದುಕಿಗೆ ಮಾರ್ಗದರ್ಶನ ಎಂದರು.
ಶರಣರ ವಿಚಾರಧಾರೆ ಪ್ರಸಾರ ಕುರಿತು ಬಿ.ಆರ್.ಪಿ.ರವೀಂದ್ರ ಅಡಿವೇರ ಉಪನ್ಯಾಸ ನೀಡಿ ಶರಣರ ವಚನ ಸಾಹಿತ್ಯ ನಿರ್ಲಕ್ಷಿಸಿದರೆ ಅನ್ಯಾಯ, ಅತ್ಯಾಚಾರ, ಶೋಷಣೆ ಹೆಚ್ಚಾಗುತ್ತವೆ ಎಂದರು.
ಮುಖ್ಯಗುರು ಚೆನ್ನವೀರಯ್ಯ ಹಿರೇಮಠ, ಗ್ರಾಪಂ ಮಾಜಿ ಉಪಾಧ್ಯಕ್ಷ ದೇವಿಂದ್ರ ಅರಣಕಲ್, ಮಲ್ಲಿನಾಥ ಸಂಗಾವಿ, ದೇವಪ್ಪ ಹಿಪ್ಪರಿಗಿ ಭಾಗವಹಿಸಿದ್ದರು.
ಮಲ್ಲಣ್ಣ ಮಾಸ್ತರ್ ಮೂಡಬೂಳ, ವೀರಯ್ಯ ಸ್ವಾಮಿ, ವೀರಸಂಗಪ್ಪ ಸುಲೇಗಾಂವ, ವಿಠ್ಠಲ್ ಅರ್ಜುಣಗಿ, ಮಮ್ಮದ್ ಶಫಿ, ವಿಶ್ವನಾಥ ಬೆಂಕಿ ಉಪಸ್ಥಿತರಿದ್ದರು. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಲೊಡ್ಡನೋರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ನರಸಪ್ಪ ಚಿನ್ನಕಟ್ಟಿ ಪ್ರಸ್ತಾವಿಕ ಮಾತನಾಡಿದರು. ರೇಖಾ ಪೂಜಾ ಪ್ರಾರ್ಥನೆ, ಅಂಬಿಕಾ ಸ್ವಾಗತ ಗೀತೆ, ಶಿಕ್ಷಕ ವಿಜಯಕುಮಾರ ಸ್ವಾಗತಿಸಿದರು. ಬಸವರಾಜ ಎಂಬತ್ತನಾಳ ನಿರೂಪಿಸಿ ಶ್ರೀಶೈಲ್ ಪರಮಗೊಂಡ ವಂದಿಸಿದರು.